ಹಿಜಾಬ್‌ ವಿವಾದದ ಹಿಂದೆ ವಿದೇಶಿ ಶಕ್ತಿ: ಸಚಿವ ಆರ್.ಆಶೋಕ್‌ ಆರೋಪ

ಬೆಂಗಳೂರು, ಫೆಬ್ರವರಿ 22, 2022 (www.justkannada.in): ಹರ್ಷ ಕೊಲೆಗೆ ಕಾರಣವಾಗಿರುವುದು ಶಿವಮೊಗ್ಗದಲ್ಲಿ ಇನ್ನೂ ಸಮಾಜಘಾತುಕ ಶಕ್ತಿಗಳು ಇರುವುದನ್ನು ತೋರಿಸುತ್ತದೆ ಎಂದು ಕಂದಾಯ ಸಚಿವ ಆರ್.ಆಶೋಕ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್‌ ವಿವಾದವು ಕೂಡ ಹರ್ಷ ಕೊಲೆಗೆ ಕಾರಣವಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಯಾರು ಕೂಡ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ, ದೇಶದ್ರೋಹಿಗಳ ಹುಟ್ಟು ಅಡಗಿಸುವುದು ನಮಗೆ ಗೊತ್ತಿದೆ. ಹಿಜಾಬ್‌ ಹಿಂದೆ ವಿದೇಶಿ ಶಕ್ತಿ ಇದೇ ಎಂದು ದೂರಿದ್ದಾರೆ.

ನಮ್ಮ ದೇಶದಲ್ಲಿ ಹಿಜಾಬ್‌ ವಿವಾದ ಬರುವುದಕ್ಕೆ ಮುನ್ನ ವಿದೇಶಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿರುವುದನ್ನು ನಾವು ಗಮನಿಸಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.