Wednesday, July 29, 2026

BDA Apartments

Home Cinema ಮಾಸಾಂತ್ಯಕ್ಕೆ ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ದರ್ಶನ

ಮಾಸಾಂತ್ಯಕ್ಕೆ ರಾಧಿಕಾ ಕುಮಾರಸ್ವಾಮಿ ‘ದಮಯಂತಿ’ ದರ್ಶನ

ಬೆಂಗಳೂರು, ನವೆಂಬರ್ 08, 2019 (www.justkannada.in): ನಟಿ ರಾಧಿಕಾ ಕುಮಾರಸ್ವಾಮಿಯ ದಮಯಂತಿ ಸಿನಿಮಾ ಬಹುಭಾಷೆಗಳಲ್ಲಿ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ.

ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ಅಭಿನಯಿಸಿರುವ ದಮಯಂತಿ ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿತ್ತು. ಇದೀಗ ಚಿತ್ರತಂಡ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

ಇದಕ್ಕೂ ಮುನ್ನ ನವೆಂಬರ್ 12 ರಂದು ಸಿನಿಮಾದ ಹಾಡುಗಳ ಬಿಡುಗಡೆಯಾಗಲಿದೆ. ಇದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡುತ್ತಿರುವುದು ಪಕ್ಕಾ ಆಗಿದೆ. ಅಲ್ಲಿಗೆ, ರಾಧಿಕಾ ಸಿನಿಮಾಗೆ ದರ್ಶನ್ ಸಾಥ್ ಕೊಡುತ್ತಿದ್ದಾರೆ.