Wednesday, September 23, 2026

BDA Apartments

Home Front Page ವಿಧಾನಸೌಧ ಮತ್ತು ಸ್ಟೇಡಿಯಂ ಅನ್ನು ಸಿಎಂ, ಡಿಸಿಎಂ ಹಂಚಿಕೊಂಡಂತೆ ಕಾಣ್ತಿದೆ- ಆರ್.ಅಶೋಕ್

ವಿಧಾನಸೌಧ ಮತ್ತು ಸ್ಟೇಡಿಯಂ ಅನ್ನು ಸಿಎಂ, ಡಿಸಿಎಂ ಹಂಚಿಕೊಂಡಂತೆ ಕಾಣ್ತಿದೆ- ಆರ್.ಅಶೋಕ್

ಬೆಂಗಳೂರು, ಜೂನ್​, 9,2025 (www.justkannada.in): ವಿಧಾನಸೌಧ ಮತ್ತು ಚಿನ್ನಸ್ವಾಮಿ ಸ್ಟೇಡಿಯಂ ಅನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್  ಹಂಚಿಕೊಂಡಂತೆ ಕಾಣ್ತಿದೆ ಎಂದು  ವಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತದಲ್ಲಿ ಸರ್ಕಾರದ ಪಾತ್ರವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಆರ್.ಅಶೋಕ್, ವಿಧಾನಸೌಧವನ್ನು ಸಿಎಂ ಸಿದ್ದರಾಮಯ್ಯ , ಸ್ಟೇಡಿಯಂ ಅನ್ನು ಡಿಕೆ ಶಿವಕುಮಾರ್​​ ಹಂಚಿಕೊಂಡಂತೆ ಕಾಣುತ್ತಿದೆ. ಏಕೆಂದರೆ ಸ್ಟೇಡಿಯಂ ಘಟನೆ ಡಿಕೆ ಶಿವಕುಮಾರ್​ ತಲೆಗೆ ಕಟ್ಟಲು ಸಿಎಂ ಪ್ಲ್ಯಾನ್ ಮಾಡುತ್ತಿದ್ದರೆ, ಇತ್ತ ವಿಧಾನಸೌಧ ವಿಚಾರವನ್ನು ಸಿಎಂ ತಲೆಗೆ ಕಟ್ಟಲು ಡಿಸಿಎಂ ಪ್ಲ್ಯಾನ್​ ಇದೆ ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್​ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದರು. ಇವರಲ್ಲಿರುವ ಅಧಿಕಾರದ ಜಗಳ, ಕುರ್ಚಿ ಕಿತ್ತಾಟ ಬೀದಿಗೆ ಬಂದಿದೆ. ಈ ಘಟನೆಯಿಂದ ಸರ್ಕಾರ ಸಿಲುಕಿಕೊಂಡಿದೆ, ಹೊರ ಬರಲು ಆಗುತ್ತಿಲ್ಲ. ಹೀಗಾಗಿ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. . ಡಿ.ಕೆ.ಶಿವಕುಮಾರ್​ ಸರ್ಕಾರದ ಭಾಗವಲ್ಲವೇ ಎಂದು ಪ್ರಶ್ನಿಸಿದರು.

ಸ್ಟೇಡಿಯಂಗೆ  ಅನುಮತಿ ಕೊಟ್ಟವರು ಪೊಲೀಸರು ಮತ್ತು ಡಿಪಿಎಆರ್ ​ನವರು. ಪೊಲೀಸ್ ಇಲಾಖೆ, ಇಂಟೆಲಿಜೆನ್ಸ್ ಸಿಎಂ ಅಧೀನದಲ್ಲೇ ಬರುತ್ತದೆ. ಅವರ ಪಾಡಿಗೆ ಅವರನ್ನು ಸ್ಟೇಡಿಯಂಗೆ ಬಿಟ್ಟಿದ್ದರೆ ತೊಂದರೆ ಆಗುತ್ತಿರಲಿಲ್ಲ. ನಿಮ್ಮ ತಪ್ಪೇ ಇಲ್ಲ ಅಂದರೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ ಎಂದು ಆರ್ ಅಶೋಕ್ ಆಗ್ರಹಿಸಿದರು.vtu

Key words: Vidhana Soudha, stadium, CM, DCM, R. Ashok