Tuesday, September 22, 2026

BDA Apartments

ಅಭಿಮಾನಿ ಕೊಟ್ಟ ಚಿನ್ನದ ಸರ ವಾಪಸ್ ಕೊಟ್ಟ ಅಪ್ಪು ! BDA JK_Adv BDA Adv
Home Cinema ಅಭಿಮಾನಿ ಕೊಟ್ಟ ಚಿನ್ನದ ಸರ ವಾಪಸ್ ಕೊಟ್ಟ ಅಪ್ಪು !

ಅಭಿಮಾನಿ ಕೊಟ್ಟ ಚಿನ್ನದ ಸರ ವಾಪಸ್ ಕೊಟ್ಟ ಅಪ್ಪು !

ಬೆಂಗಳೂರು, ಜನವರಿ 09, 2019 (www.justkannada.in): ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿರುವ ವ್ಯಕ್ತಿಯೊಬ್ಬರು ಇತ್ತೀಚೆಗಷ್ಟೇ ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟಿದ್ದರು.

ಆಗ, ಅಣ್ಣಾವ್ರ ಭಾವಚಿತ್ರವಿರುವ ಪೆಂಡೆಂಟ್ ಮತ್ತು ಚಿನ್ನದ ಸರವನ್ನು ಪುನೀತ್ ರಾಜ್ ಕುಮಾರ್ ಗೆ ಉಡುಗೊರೆಯಾಗಿ ನೀಡಲು ಮುಂದಾದರು.

ಅಭಿಮಾನಿಗೆ ನಿರಾಸೆ ಮಾಡಬಾರದು ಅಂತ ಒಮ್ಮೆ ಆ ಸರ ಮತ್ತು ಪೆಂಡೆಂಟ್ ನ ಅಪ್ಪು ಧರಿಸಿದರು. ಬಳಿಕ ಆ ಸರ ಮತ್ತು ಪೆಂಡೆಂಟ್ ನ ತೆಗೆದು ಆ ಅಭಿಮಾನಿಯ ಕೊರಳಿಗೆ ಹಾಕಿದರು.

ನಿಮ್ಮ ಪ್ರೀತಿ, ಅಭಿಮಾನವಷ್ಟೇ ನಮಗೆ ಬೇಕು. ಬೇರೇನೂ ಬೇಡ ಅಂತ ಹೇಳಿ ಕೆಲ ಕಾಲ ಆ ಅಭಿಮಾನಿಯ ಜೊತೆಗೆ ಅಪ್ಪು ಮಾತುಕತೆ ನಡೆಸಿದರು.