Friday, September 18, 2026

BDA Apartments

ಯಶ್ ಬರ್ತ್ ಡೇ ಪಾರ್ಟಿಯಲ್ಲಿ ಸ್ಯಾಂಡಲ್’ವುಡ್ ಸ್ಟಾರ್’ಗಳು ! BDA JK_Adv BDA Adv
Home Cinema ಯಶ್ ಬರ್ತ್ ಡೇ ಪಾರ್ಟಿಯಲ್ಲಿ ಸ್ಯಾಂಡಲ್’ವುಡ್ ಸ್ಟಾರ್’ಗಳು !

ಯಶ್ ಬರ್ತ್ ಡೇ ಪಾರ್ಟಿಯಲ್ಲಿ ಸ್ಯಾಂಡಲ್’ವುಡ್ ಸ್ಟಾರ್’ಗಳು !

ಬೆಂಗಳೂರು, ಜನವರಿ 09, 2019 (www.justkannada.in): ಬೆಳಗ್ಗೆ ಅಭಿಮಾನಿಗಳೊಂದಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ ಯಶ್ ರಾತ್ರಿ ಚಿತ್ರರಂಗದ ಸ್ನೇಹಿತರ ಜೊತೆಗೆ ಯಶ್ ಕಾಲ ಕಳೆದರು.

ಬುಧವಾರ ರಾತ್ರಿ ಯಶ್ ಆಯೋಜನೆ ಮಾಡಿದ್ದ ವಿಶೇಷ ಪಾರ್ಟಿಯಲ್ಲಿ ಅನೇಕ ಸ್ಟಾರ್ ಗಳು ಭಾಗಿಯಾಗಿದ್ದರು. ಪ್ರತಿ ವರ್ಷವೂ ಹುಟ್ಟುಹಬ್ಬದ ಸಂಜೆ ಯಶ್ ತಮ್ಮ ಚಿತ್ರರಂಗದ ಸ್ನೇಹಿತರನ್ನು ಭೇಟಿ ಮಾಡುತ್ತಾರೆ.

ಪವನ್ ಒಡೆಯರ್, ಪತ್ನಿ ಅಪೇಕ್ಷ ಪುರೋಹಿತ್ ಕೂಡ ಹಾಜರಿದ್ದರು. ಯಶ್ ರೊಂದಿಗಿನ ಫೋಟೋವನ್ನು ಸೋ‍ಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪವನ್ ಶುಭಾಶಯ ತಿಳಿಸಿದ್ದಾರೆ.

ಆರ್ ಜೆ ಪ್ರದೀಪ್, ನಟಿ ಶ್ರುತಿ ಪುತ್ರಿ ಗೌರಿ, ದಿಗಂತ್, ಧನಂಜಯ್, ಅರುಣ್ ಸಾಗರ್, ಕಾರ್ತಿಕ್ ಗೌಡ ಹಾಗೂ ಯಶ್ ಜೊತೆಗೆ ಕೆಲಸ ಮಾಡಿದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.