ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು,ಅಕ್ಟೊಂಬರ್,01,2020(www.justkannada.in)  : ಹಲವು ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಇಂದು ಪಿಂಚಣಿದಾರರು ಸಂಘಟನೆಗಳು ಜತೆಯಾಗಿ ಸಮನ್ವಯ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿದರು.jk-logo-justkannada-logoನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಸಮನ್ವಯ ಸಮಿತಿ ಸಂಚಾಲಕ ಲ.ಜಗನ್ನಾಥ್ ಮಾತನಾಡಿ, ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟ(WFTU)ಕ್ಕೆ ಸಂಯೋಜಿತವಾಗಿರುವ ಪಿಂಚಣಿದಾರರ, ನಿವೃತ್ತರ ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಟನೆ (TUI) ಯು ಶೋಷಣೆಯ ವಿರುದ್ದ ಹೋರಾಡುತ್ತಿರುವ ಜನತೆಗೆ ಸೌಹಾರ್ದ ಸೂಚಿಸಲು ಮತ್ತು ಹಿರಿಯ ನಾಗರೀಕರಿಗೆ ಘನತೆಯ ಬದುಕಿನ ಜವಾಬ್ದಾರಿಯನ್ನು ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

Protest-demanding-claims

ಬಂಡವಾಳಶಾಹಿ ದೇಶಗಳು ಈ ಸೈದ್ದಾಂತಿಕ ಭೀತಿಯಿಂದ ಮುಕ್ತವಾಗಿದ್ದು, ಈ ದೇಶಗಳಲ್ಲಿ ಹಿರಿಯ ನಾಗರೀಕರ ಜೀವನ ದುರ್ಬರವಾಗಿದೆ. ಜಾಗತೀಕರಣ,ಮುಕ್ತ ಮಾರುಕಟ್ಟೆ, ಕಾರ್ಪೊರೇಟ್ ಪ್ರಭುತ್ವ ವಿಧಾನ ಮತ್ತು ಅತಿಯಾದ ಲಾಭ ದಾಹ ಎಲ್ಲವೂ ಮಾನವೀಯ ಮೌಲ್ಯಗಳನ್ನು ಸಮಾಜದಿಂದ ವ್ಯತಿರಿಕ್ತಗೊಳಿಸುತ್ತಿದೆ ಎಂದು ಬೇಸರವ್ಯಕ್ತಪಡಿಸಿದರು.

ಮುಂದಿನ ತಲೆಮಾರಿನ ನಿವೃತ್ತಿದಾರರು,ನೌಕರರು, ಅನಿಶ್ಚಿತತೆಯ, ಅಭದ್ರತೆಯ ಬದುಕು ಎದುರಿಸಬೇಕಾಗುತ್ತದೆ. ಭವಿಷ್ಯದ ಭರವಸೆಗೆಂದು ಉಳಿಸಲ್ಪಟ್ಟ ಹಣವು ಕಾರ್ಪೋರೇಟರ್ ಗಳ ಅತಿಯಾದ ಹಣದಾಸೆಗೆ ಬಲಿಯಾಗಲಿದೆ ಎಂದು ದೂರಿದ್ದಾರೆ.

ವೃದ್ದರ, ಹಿರಿಯ ನಾಗರೀಕರ ಸಂಧ್ಯಾ ಕಾಲದ ಸಂತೃಪ್ತ ಬದುಕಲು ಅವಕಾಶ ಕಲ್ಪಿಸಬೇಕು. ಸ್ವಾವಲಂಬಿ ಬದುಕಿನ ನಿರ್ವಹಣೆಗೆ ತಕ್ಕ ಪಿಂಚಣಿ ನೀಡಲೇಬೇಕು. ಪಿಂಚಣಿನಿಧಿಯ ಖಾಸಗೀಕರಣ ಬೇಡ, ಕಾರ್ಮಿಕ ವಿರೋಧಿ ಸಂಹಿತೆಗಳು ವಾಪಸ್ಸಾಗಲಿ, ಎಲ್ಲರಿಗೂ ಪಿಂಚಣಿ ದೊರೆಯಲಿ ಎಂಬಿತ್ಯಾದಿ ಫಲಕಗಳನ್ನು ಪ್ರದರ್ಶಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರಾದ ಜಿ.ಜಯರಾಂ, ಎನ್.ವಿಜಯಕುಮಾರ್,ಜಿ.ರಾಜೇಂದ್ರ ಮತ್ತಿತರರು ಭಾಗವಹಿಸಿದ್ದರು.

key words : Protest-demanding-claims