ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಒಎಸ್‌ಒಪಿ ಅಡಿ ಚನ್ನಪಟ್ಟಣದ ಗೊಂಬೆಗಳ ಮಾರಾಟ

ಬೆಂಗಳೂರು, ಮಾರ್ಚ್ 26, 2022 (www.justkannada.in): ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಕೇಂದ್ರ ಆಯವ್ಯಯದಲ್ಲಿ ಘೋಷಿಸಿದ ‘ಒಂದು ನಿಲ್ದಾಣ, ಒಂದು ಉತ್ಪನ್ನ’ (ಒಎಸ್‌ಒಪಿ) ಕಾರ್ಯಕ್ರಮದಡಿ ಬೆಂಗಳೂರು ಮಹಾನಗರದ ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಪ್ರಖ್ಯಾತ ಚನ್ನಪಟ್ಟಣದ ಗೊಂಬೆಗಳ ಮಾರಾಟ ಮಾಡುವ ಏರ್ಪಾಡು ಮಾಡಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ಯಾಂ ಸಿಂಗ್ ಅವರು ಕೆಎಸ್‌ಆರ್ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣದ ಗೊಂಬೆಗಳನ್ನು ಮಾರಾಟ ಮಾಡುವ ಮಳಿಗೆಯನ್ನು ಶುಕ್ರವಾರ ಉದ್ಘಾಟಿಸಿದರು. ಚನ್ನಪಟ್ಟಣದ ಗೊಂಬೆಗಳು ಮರದಿಂದ ತಯಾರಿಸಿರುವ ಆಟಿಕೆಗಳಾಗಿದ್ದು ರಾಮನಗರ ಜಿಲ್ಲೆಯ ಗೊಂಬಗಳ ಊರು ಎಂದು ಖ್ಯಾತಿಗಳಿಸಿರುವ ಚನ್ನಪಟ್ಟಣದಲ್ಲಿ ತಯಾರಿಸಲಾಗುತ್ತವೆ.

ಈ ಆಕರ್ಷಕ ಮರದ ಆಟಿಕೆಗಳಿಗೆ ಭೌಗೋಳಿಕ ಸೂಚ್ಯಂಕ (ಉI) ಟ್ಯಾಘ್ ಲಭಿಸಿದೆ ಎಂದು ನೈಋತ್ಯ ರೈಲ್ವೆ ಕಾರ್ಯಾಲಯ ಮಾಹಿತಿ ಒದಗಿಸಿದೆ. “ಬೆಂಗಳೂರು ರೈಲ್ವೆ ವಿಭಾಗವು ಚನ್ನಪಟ್ಟಣ ಕರಕುಶಲ ವಸ್ತುಗಳನ್ನು ತಯಾರಿಸುವ ಕಲಾವಿದರ ಸಂಘದವರೇ ಆಘಿರುವ ಸ್ಥಳೀಯ ಕರಕುಶಲಕರ್ಮಿಕ ವಿ. ಪ್ರಕಾಶ್ ಎಂಬುವವರಿಗೆ ಚನ್ನಪಟ್ಟಣದ ಮರದ ಆಟಿಕೆಗಳನ್ನು ಮಾರಾಟ ಮಾಡಲು ಪ್ರಾಯೋಗಿಕವಾಗಿ ಮಳಿಗೆಯನ್ನು ಮಂಜೂರು ಮಾಡಿದೆ.

ರೈಲ್ವೆ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿಯವರ ಭಾರತವನ್ನು ಸ್ವಾವಲಂಬಿ ರಾಷ್ಟçವನ್ನಾಗಿಸುವ ನಿಟ್ಟಿನಲ್ಲಿ ರೂಪಿಸಿರುವ ಆತ್ಮನಿರ್ಭರ ಭಾರತ ಅಭಿಯಾನದ ಅಡಿ ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.

ಸ್ಥಳೀಯ ಕರಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡಲು ಸೂಕ್ತ ಮಾರುಕಟ್ಟೆ ಒದಗಿಸುವುದು ಈ ಉಪಕ್ರಮದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣ, ಖ್ಯಾತ ಚನ್ನಪಟ್ಟಣದ ಆಟಿಕೆಗಳಿಗೆ ಮಾರುಕಟ್ಟೆಯನ್ನು ಒಗದಿಸಿದಂತಹ ರಾಜ್ಯದ ಮೊಟ್ಟ ಮೊದಲ ರೈಲ್ವೆ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
https://bit.ly/3LfMcN0