ಮೋದಿ ಮುಖ ನೋಡಿ ಮತಹಾಕಿ ಇಲ್ಲದಿದ್ರೆ ಭಿಕ್ಷೆ ಬೇಡಬೇಕಾಗುತ್ತದೆ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ.

ವಿಜಯಪುರ,ಮಾರ್ಚ್,18,2023(www.justkannada.in): ರಾಜ್ಯ ವಿಧಾನಸಭೆ ಸಮೀಪಿಸುತ್ತಿದ್ದು, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ಕನಸು ಕಟ್ಟಿಕೊಂಡಿರುವ ಬಿಜೆಪಿ  ಮತದಾರರನ್ನ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ನಡುವೆ ಇದೀಗ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಮೋದಿ ಮುಖ ನೋಡಿ ಮತ ಹಾಕಿ ಇಲ್ಲದಿದ್ದರೆ ಭಿಕ್ಷೆ ಬೇಡಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ನಡೆದ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚುನಾವಣೆ ದಿನ ಮೋದಿ ಮುಖ ನೋಡುವುದು, ಮತದಾನ ಮಾಡುವುದು ಅಷ್ಟೆ. ಮೋದಿಗೆ ಮತ ಹಾಕಿದರೆ ಸುರಕ್ಷಿತವಾಗಿ ಇರುತ್ತೀರಿ. ಇಲ್ಲದಿದ್ದರೆ ಪಾಕಿಸ್ತಾನ ದೇಶದಂತೆ ಎಲ್ಲರೂ ದಿವಾಳಿಯಾಗಬೇಕಾಗುತ್ತದೆ, ಭಿಕ್ಷೆ ಬೇಡಬೇಕಾಗುತ್ತೆ ಎಂದಿದ್ದಾರೆ. ಅಲ್ಲದೆ  ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಪಡೆದಿರುವುದು ನಮ್ಮ ಸುದೈವ ಎಂದು ತಿಳಿಸಿದರು.

Key words: Modi’s -face and –vote-beg – MLA -Basan Gowda Patil Yatnal- statement.