ಪಾಕ್ ಪರ ಘೋಷಣೆ ಪ್ರಕರಣ: ಉಪರಾಷ್ಟ್ರಪತಿಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಪತ್ರ.

ಬೆಂಗಳೂರು,ಮಾರ್ಚ್,7,2024(www.justkannada.in) : ಪಾಕ್ ಪರ ಘೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜ್ಯಸಭೆ ಸದಸ್ಯ ನಾಸೀರ್ ಹುಸೇನ್ ಗೆ  ಪ್ರಮಾಣ ವಚನ ಬೋಧಿಸದಂತೆ ಉಪರಾಷ್ಟ್ರಪತಿ ಜಗದೀಶ್ ಧನಕರ್ ಅವರಿಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎನ್ನಲಾಗಿದೆ.

24 ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಜಗದೀಶ್ ಧನಕರ್ ಅವರಿಗೆ ಪತ್ರ ಬರೆದಿದ್ದಾರೆ. “ರಾಜ್ಯಸಭೆಗೆ ಹೊಸದಾಗಿ ಚುನಾಯಿತರಾದ ಸೈಯದ್ ನಸೀರ್ ಹುಸೇನ್ ಅವರಿಗೆ ಸಂಸತ್ತಿನ ಪ್ರತಿಷ್ಠಿತ ಮೇಲ್ಮನೆ ಸದಸ್ಯರಾಗಿ ಕಾರ್ಯನಿರ್ವಹಿಸಲು ಪ್ರಮಾಣ ವಚನ ಬೋಧಿಸಬೇಡಿ” ಎಂದು ಮನವಿ ಮಾಡಿದ್ದಾರೆ.

ರಾಜ್ಯಸಭಾ ಚುನಾವಣೆ ವೇಳೆ ಜಯಗಳಿಸಿ ವಿಜಯೋತ್ಸವ ಸಂದರ್ಭದಲ್ಲಿ ರಾಷ್ಟ್ರೀಯ ವಿರೋಧಿ ಘೋಷಣೆ ಕೂಗಿರುವ ಪ್ರಕರಣ ಇತ್ಯರ್ಥವಾಗುವರೆಗೆ ಪ್ರಮಾಣ ವಚನ ಬೋಧಿಸದಂತೆ‌ ಮನವಿ ಮಾಡಿದ್ದಾರೆ.  ಉಪರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಮದನ್ ಗೋಪಾಲ್ ಮತ್ತು ಭಾಸ್ಕರ್ ರಾವ್ ಸಹಿ ಇದೆ ಎನ್ನಲಾಗಿದೆ.

Key words: Pro-Pak- declaration- case: Letter – retired IAS- IPS- officers – Vice President.