ಮಂಡ್ಯದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ- ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ.

ಕಲ್ಬುರ್ಗಿ,ಮಾರ್ಚ್,7,2023(www.justkannada.in): ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ನಿಂದ ಯಾರು ನಿಲ್ಲುತ್ತಾರೋ ಗೊತ್ತಿಲ್ಲ. ಆದರೆ ಮಂಡ್ಯದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.

ಹಣಕೊಟ್ಟವರಿಗೆ ಟಿಕೆಟ್ ಎಂಬ ರವೀಂದ್ರ ಅವರ ಹೇಳಿಕೆ ಕುರಿತು ಕಲ್ಬುರ್ಗಿಯಲ್ಲಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,   ರವೀಂದ್ರ ಯಾರು ಅಂತ ಯಾರಿಗೂ ಗೊತ್ತಿಲ್ಲ.  ಎಲ್ಲೋ ಕುಳಿತು ಆರೋಪ ಮಾಡಿದ್ರೆ  ಆಯ್ತಾ..?  ಟಿಕೆಟ್ ಸಿಗದ ಕಾರಣ ಹಾಗೆ ಮಾತನಾಡಿರಬಹುದು. ನಮ್ಮ ಶಾಸಕರು ಮುಖಂಡರು ಹಾಗೆ ಹೇಳಲ್ಲ. ಮಂಡ್ಯದಲ್ಲಿ ನಮ್ಮ ನಾಯಕರು ಮುಖಂಡರು ಒಂದಾಗಿದ್ದಾರೆ ಎಂದರು.

ಬಿಜೆಪಿ ಜೆಡಿಎಸ್ ನಿಂದ ಯಾರು ಸ್ಪರ್ಧೆ ಮಾಡುತ್ತಾರೋ ಗೊತ್ತಿಲ್ಲ. ಆದರೆ ಮಂಡ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: Congress -victory – Mandya – Minister -Dinesh Gundurao – confident.