Tuesday, September 29, 2026

BDA Apartments

ಮೈಸೂರಿನ ಐಶ್(AIISH) ನಲ್ಲಿ ಏಪ್ರಿಲ್ 28 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ BDA J...
Home Front Page ಮೈಸೂರಿನ ಐಶ್(AIISH) ನಲ್ಲಿ ಏಪ್ರಿಲ್ 28 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ.

ಮೈಸೂರಿನ ಐಶ್(AIISH) ನಲ್ಲಿ ಏಪ್ರಿಲ್ 28 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ.

ಮೈಸೂರು,ಏಪ್ರಿಲ್,26,2023(www.justkannada.in): ಶಾಲಾಪೂರ್ವ ಹಂತದ ಮಕ್ಕಳ ಯಶಸ್ಸನ್ನು ಆಚರಿಸುವ ಸಲುವಾಗಿ 28.04.2023 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭವನ್ನು ಮೈಸೂರಿನ ಅಖಿಲ ಭಾರತ್ ವಾಕ್ ಮತ್ತು ಶ್ರವಣ ಸಂಸ್ಥೆ, ವಿಶೇಷ ಶಿಕ್ಷಣ ವಿಭಾಗ ಆಯೋಜಿಸಿದೆ.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಇಂದಿರಾ ಪ್ರಕಾಶ್ , ಮಾತು-ಭಾಷಾ ಪೆಥಾಲಾಜಿಸ್ಟ್ ಮತ್ತು ಕಿರುತೆರೆ-ಹಿರಿತೆರೆ ನಟಿಯವರು ಆಗಮಿಸಲಿದ್ದು ವಿಶೇಷ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ವೆಂಕಟೇಶ್ ರವರು ಉಸ್ತುವಾರಿ ನಿರ್ದೇಶಕರಾದ ಪ್ರೊಫೆಸರ್ ಪಿ ಮಂಜುಳರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಮೈಸೂರಿನ ಐಶ್(AIISH) ನಲ್ಲಿ ಏಪ್ರಿಲ್ 28 ರಂದು ಶಾಲಾಪೂರ್ವ ಪದವಿ ಪ್ರಧಾನ ಸಮಾರಂಭ aiish

2022-23ರ ಶೈಕ್ಷಣಿಕ ವರ್ಷಕ್ಕೆ ಮುಖ್ಯವಾಹಿನಿ ಶಾಲೆಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಲು ಸಂವಹನ ತೊಂದರೆವುಳ್ಳ 86 ಮಕ್ಕಳು ಪ್ರೀಸ್ಕೂಲ್ ಪದವಿ ಪಡೆಯುತ್ತಿದ್ದಾರೆ. ಅವರಲ್ಲಿ 90%(78 ಮಕ್ಕಳು) ಮುಖ್ಯವಾಹಿನಿಗೆ ಬರುತ್ತಿದ್ದು ಉಳಿದವರು ಸಮನ್ವಯ ಶಿಕ್ಷಣ ಪಡೆಯಲು ಸಿದ್ಧರಾಗಿದ್ದಾರೆ. ಈ ಮಕ್ಕಳಿಗೆ ವ್ಯವಸ್ಥಿತ ಪಠ್ಯಕ್ರಮ ಮತ್ತು ಅವರ ಕಲಿಕೆಗೆ ಸೂಕ್ತವಾದ ಬೋಧನಾತಂತ್ರಗಳ ಬಳಕೆಯಿಂದ ಇಂದಿನ ಈ ಯಶಸ್ಸು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ಮತ್ತು ಆರೈಕೆದಾರರ ಮಹತ್ವದ ಪಾತ್ರ ಇದೆ. ಅವರ ಪರಿಶ್ರಮದ ಫಲವೇ ಈ ದಿನದ ಮಕ್ಕಳ ಸಾಧನೆಗೆ ದಾರಿ.

key words: Pre-school –graduation- ceremony -April 28 -AIISH, Mysore.