ಆ.29 ರಂದು ಮೈಸೂರು ಸಾಮಾಜಿಕ ಮತ್ತು ಶೈಕ್ಷಣಿಕ ವಿಕಾಸ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ…

ಮೈಸೂರು,ಆಗಸ್ಟ್,26,2020(www.justkannada.in):  ಮೈಸೂರು ಸಾಮಾಜಿಕ ಮತ್ತು ಶೈಕ್ಷಣಿಕ ವಿಕಾಸ ವೇದಿಕೆ ವತಿಯಿಂದ ಆಗಸ್ಟ್ 29 ರಂದು  ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.jk-logo-justkannada-logo

ಆಗಸ್ಟ್ 29 ರಂದು ಸಂಜೆ 5 ಗಂಟೆಗೆ ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮೈಸೂರು ಸಾಮಾಜಿಕ ಮತ್ತು ಶೈಕ್ಷಣಿಕ ವಿಕಾಸ ವೇದಿಕೆ ಆಯೋಜಿಸಿದ್ದು ಮೈಸೂರು ವಿಶ್ವ ವಿದ್ಯಾನಿಲಯ ಕುಲಪತಿ ಡಾ. ಜಿ. ಹೇಮಂತ್ ಕುಮಾರ್ ಕಾರ್ಯಕ್ರಮವನ್ನ ಉದ್ಘಾಟಿಸಲಿದ್ದಾರೆ. ಮೈಸೂರು ಸಾಮಾಜಿಕ ಮತ್ತು ಶೈಕ್ಷಣಿಕ ವಿಕಾಸ ವೇದಿಕೆ ಅಧ್ಯಕ್ಷ ವರುಣ್ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮೈಸೂರು ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ಮಹೇಶ್, ಸ್ಕಿಲ್ ಟೆಕ್  ಬಿಲ್ಡರ್  ಅಂಡ್ ಡೆವಲಪರ್ಸ್ ನಿರ್ದೇಶಕರಾದ ವಿರೇಶ್, ಮೈಸೂರು ಸುಪ್ರೀಂ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಎಂ.ಎಲ್ ರವೀಂದ್ರ ಸ್ವಾಮಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಮನೋಹರ ಬೇವಿನ ಮರ, ಮೈಸೂರು ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ನಟೇಶ್, ಕನ್ನಡ ಪ್ರಭ ದಿನಪತ್ರಿಕೆ ಮುಖ್ಯ ವರದಿಗಾರರು ಹಾಗೂ ಲೇಖಕರಾದ ಅಂಶಿಪ್ರಶನ್ನಕುಮಾರ್, ಹಾವೇರಿ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಕೆ. ವಸಂತ್ ಕುಮಾರ್, ಕೆಎಸ್ ಐಐಡಿಸಿ ನಿರ್ದೇಶಕರಾದ ಎಸ್. ಮಹದೇವಸ್ವಾಮಿ, ಯುಪಿಎಸ್ ಪರೀಕ್ಷೆಯಲ್ಲಿ 527ನೇ ರ್ಯಾಂಕ್ ಪಡೆದ ವರುಣ್ ಗೌಡ, 257ನೇ ರ್ಯಾಂಕ್ ಪಡೆದ ಪ್ರಿಯಾಂಕ ಎಂ ಅವರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಿದ್ದಾರೆ.

Key words: Pratibha purskar- Program – Mysore -Social and Educational Development Forum-mysore university-VC- hemanth kumar