ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ದೂರು ದಾಖಲು

ಬೆಂಗಳೂರು, ಆಗಸ್ಟ್, 26, 2020(www.justkannada.in); ಕೋಲು ಮಂಡೆ ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬ ಆರೋಪದ ಮೇಲೆ ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ದೂರು ದಾಖಲಿಸಲಾಗಿದೆ.

jk-logo-justkannada-logo

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತೇಜಸ್ ಎಂಬುವವರು ದೂರು ದಾಖಲಿಸಿದ್ದಾರೆ. ಗಾಯಕನ ವಿರುದ್ಧ ಎನ್ ಸಿ ಆರ್ ದಾಖಲು ಮಾಡಿರುವ ಪೊಲೀಸರು ಪ್ರಕರಣ ಸಂಬಂಧ ವಿಚಾರಣೆಗೆ ಮುಂದಾಗಿದ್ದಾರೆ.

Finally-lodged –complaint-Rapper-Chandan Shetty

ಚಂದನ್ ಶೆಟ್ಟಿ ಅವರು ಜಾನಪದ ಹಾಡನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದು, ಅಶ್ಲೀಲವಾಗಿ ವಿಡಿಯೋ ಚಿತ್ರಿಕರಿಸಿದ್ದಾರೆ ಎಂದು ನೆನ್ನೆ ಮಹಾದೇಶ್ವರ ಭಕ್ತರಿಂದ ಆಕ್ರೋಶವ್ಯಕ್ತವಾಗಿತ್ತು. ಈ ಕುರಿತು ಚಂದನ್ ಶೆಟ್ಟಿ ಎಲ್ಲರ ಕ್ಷಮೆಯಾಚಿಸಿದ್ದರು. ಅಲ್ಲದೆ ಆ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ನಿಮದ ಡಿಲೀಟ್ ಮಾಡಿಸಲಾಗಿತ್ತು. ಹೀಗಾಗಿಯೂ, ಇಂದು ಹಿಂದೂ ಸಂಘಟನೆ ಕಾರ್ಯಕರ್ತರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

Key words ; Finally-lodged –complaint-Rapper-Chandan Shetty