Saturday, August 15, 2026

BDA Apartments

Home Front Page ‘ದೇಶಕ್ಕೆ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ’ : ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರ ಪ್ರತಿಭಟನೆ.

‘ದೇಶಕ್ಕೆ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ’ : ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಬಲಿಗರ ಪ್ರತಿಭಟನೆ.

ಮೈಸೂರು,ಮಾರ್ಚ್,13,2024(www.justkannada.in): ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಬೆಂಬಲಿಗರು ಮೈಸೂರಿನಲ್ಲಿ ಪ್ರತಿಭಟನೆಗಿಳಿದಿದ್ದಾರೆ.

ಮೈಸೂರಿನ ಹಿನಕಲ್ ಫ್ಲೈ ಓವರ್ ಬಳಿ ಜಮಾಯಿಸಿದ ಸಂಸದ ಪ್ರತಾಪ್ ಸಿಂಹ ಅವರ ಬೆಂಬಲಿಗರು ಮೈಸೂರು ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.

ದೇಶಕ್ಕಾಗಿ ಮೋದಿ, ಮೈಸೂರಿಗೆ ಪ್ರತಾಪ್ ಸಿಂಹ, ಪ್ರತಾಪ್ ಸಿಂಹ ಬೇಕೇ ಬೇಕು ಎಂದು ಪ್ರತಿಭಟನಾಕಾರರು  ಘೋಷಣೆ ಕೂಗಿದ್ದಾರೆ. ಇನ್ನು ಪ್ರತಾಪ್ ಸಿಂಹ ಪರ ಇಂದು ಬೆಂಬಲಿಗರು ಸಾಲು ಸಾಲು ಪ್ರತಿಭಟನೆ ಕೈಗೊಂಡಿದ್ದಾರೆ.

Key words: Pratap Simha- Mysore- Supporters- protest- demanding -tickets.