Thursday, August 13, 2026

BDA Apartments

Home Front Page ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ  ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ಏನು..?

ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ  ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ಏನು..?

ಬೆಂಗಳೂರು,ಮಾರ್ಚ್,13,2024(www.justkannada.in):  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಹೃದ್ರೋಗ ಸಂಸ್ಥೆ ಮಾಜಿ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧೆ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಲೋಕಸಭೆ ಚುನಾವಣೆಯಲ್ಲಿ ಡಾ.ಸಿ.ಎನ್ ಮಂಜುನಾಥ್ ಸ್ಪರ್ಧಿಸುವುದರಿಂದ ನಮಗೆ ಬೇಸರವಿಲ್ಲ. ನಾವು ಹಿಂದೆ ದೇವೇಗೌಡರ ವಿರುದ್ದ ಗೆದ್ದಿದ್ದೇವೆ. ಕುಮಾರಸ್ವಾಮಿ ವಿರುದ್ದವೂ ಗೆದ್ದದ್ದೇವೆ ಎಂದರು.

ಡಿಕೆ ಸುರೇಶ್ ಕೇವಲ ಲೋಕಸಭೆ ಮೆಂಬರ್ ಅಲ್ಲ. ಪಂಚಾಯತ್ ಮೆಂಬರ್ ರೀತಿ ಕೆಲಸ ಮಾಡಿದ್ದಾರೆ. ಡಿಕೆ ಸುರೇಶ್  ವಿರುದ್ದ ಯಾರು ಬೇಕಾದರೂ ನಿಲ್ಲಲಿ   ಮೊಮ್ಮಗನ ಎಲೆಕ್ಷನ್  ನೋಡಿದ್ದೇನೆ. ತಾತನ ಚುನಾವಣೆ ನೋಡಿದ್ದೇನೆ. ಬಿಜೆಪಿಗೆ ಆಡಳಿತ ವಿರೋಧಿ ಅಲೆ ಇದೆ.  ಅದಕ್ಕಾಗಿ 10 ಸಂಸದರನ್ನ ಬದಲಾವಣೆ ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

Key words: DCM -DK Shivakumar- reaction -about -Dr. CN Manjunath- competition.