ಧನಾತ್ಮಕ ಭಾವನೆ ಇಟ್ಟುಕೊಂಡು ಓದಿದರೆ ಖಂಡಿತ ಯಶಸ್ಸು ಲಭಿಸುತ್ತದೆ-  ಪ್ರೊ.ಎಂ.ಕೃಷ್ಣೇಗೌಡ…

 

ಮೈಸೂರು,ಏಪ್ರಿಲ್,6,2021:  ನಮ್ಮ ಪರಿಶ್ರಮ, ಓದು ಹಾಗೂ ಬದ್ಧತೆ ಕೈಹಿಡಿಯುತ್ತದೆ. ಧನಾತ್ಮಕ ಭಾವನೆ ಇಟ್ಟುಕೊಂಡು ಓದಿದರೆ ಖಂಡಿತವಾಗಿಯೂ ಯಶಸ್ಸು ಲಭಿಸುತ್ತದೆ ಎಂದು ವಾಗ್ನಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.

ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ವತಿಯಿಂದ ಮಂಗಳವಾರ ಬೆಳಿಗ್ಗೆ ಕೆಎಸ್‌ಒಯು ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಲೇಜು ಸಹಾಯಕ ಪ್ರಾಧ್ಯಾಪಕರ ಆರ್ಹತಾ ಪರೀಕ್ಷೆಗಳಾದ ಕೆ-ಸೆಟ್ ಮತ್ತು ಯುಜಿಸಿ- ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಾದವರಿಗೆ ಹೇಳುವುದನ್ನು ಆಲಿಸುವ, ನೋಡುವ ಹಾಗೂ ಗ್ರಹಿಸುವ ಶಕ್ತಿ ಇರಬೇಕು. ಇಲ್ಲವಾದರೆ ಆತ ಎಷ್ಟೇ ಪದವಿ ಪಡೆದರೂ ಪ್ರಯೋಜನಕ್ಕೆ ಬರುವುದಿಲ್ಲ. ತರಬೇತಿ ಶಿಬಿರದಲ್ಲಿ ಬೋಧಕರು ಹೇಳುವ ಆಂಶಗಳನ್ನು ತಮ್ಮಲ್ಲಿ ಆಳವಡಿಸಿಕೊಳ್ಳುವ ಜೊತೆಗೆ ಆಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಎಂದರು.

ಜಗತ್ತು ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಈ ನಡುವೆ ಯಾವ ಬಗೆಯ ಶಿಕ್ಷಣ ಅಗತ್ಯ ಎಂಬುದನ್ನು ಹೇಳಲಾಗುತ್ತಿಲ್ಲ. ಆದರೆ ಎರಡು ದಶಕಗಳ ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಶಿಕ್ಷಕನಾದವನು ತಾನು ಕಲಿತದ್ದನ್ನು ಹೇಳುವ, ಬೋಧಿಸುವ ಅವಕಾಶ ಹೆಚ್ಚಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಎಲ್ಲಾ ಮಾಹಿತಿಯೂ ಕಂಪ್ಯೂಟರ್, ಮೊಬೈಲ್‌ ನಲ್ಲೇ ಲಭ್ಯವಾಗುತ್ತಿದೆ. ಕಚೇರಿಗೆ ತೆರಳದೆ ಆನ್‌ಲೈನ್‌ ನಲ್ಲೇ ಸಂದರ್ಶನಗಳು ನಡೆಯುತ್ತಿವೆ. ಇದು ಆಶ್ಚರ್ಯ ಹುಟ್ಟಿಸುವ ಜೊತೆಗೆ ಗಾಬರಿಯನ್ನು ತರಿಸಿದೆ ಎಂದರು.

ಆನ್‌ಲೈನ್ ವೇದಿಕೆಯಲ್ಲೇ ಮಕ್ಕಳು ಪಾಠ ಕಲಿಯುವುದಾದರೆ, ಡಿಜಿಟಲ್ ವೇದಿಕೆಯಿಂದ ಮಕ್ಕಳು ಕಲಿಯುವುದಾದರೆ ಶಿಕ್ಷಕನ ಆಗತ್ಯವೇನಿದೆ ಎಂಬ ಪ್ರಶ್ನೆಗಳು ಈಗಾಗಲೇ ಎದ್ದಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಅಸ್ತಿತ್ವವನ್ನು ನಾವು ಸಾಧಿಸಬೇಕಿದೆ. ಯಾವುದೇ ತಂತ್ರಜ್ಞಾನ ಬಂದರೂ ನಮ್ಮ ಆಸ್ತಿತ್ವವನ್ನು ತೋರಿಸಬೇಕಿದೆ. ಅದಕ್ಕಾಗಿ ನಾವೆಲ್ಲರೂ ತಯಾರಿ ನಡೆಸಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಮಾತನಾಡಿ, ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಮುನ್ನ ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ಆಗತ್ಯವಾಗಿದೆ. ನೀವು ತರಗತಿಯಲ್ಲಿ ಎಷ್ಟೇ ಕಲಿತರೂ ಸ್ಪರ್ಧಾತ್ಮಕ ಪರೀಕ್ಷೆ ವಿಷಯಕ್ಕೆ ಬಂದಾಗ ತರಬೇತಿ ಹಾಗೂ ಮಾರ್ಗದರ್ಶನ ಹೆಚ್ಚು ಸಹಕಾರಿಯಾಗಬಲ್ಲವು. ಈ ನಿಟ್ಟಿನಲ್ಲಿ ಮುಕ್ತ ವಿಶ್ವವಿದ್ಯಾನಿಲಯ ನೀಡುತ್ತಿರುವ ತರಬೇತಿ ಗುಣಮಟ್ಟದ್ದುಳ್ಳದಾಗಿದೆ ಎಂದು ನುಡಿದರು. Positive -readings -will definitely - success - Prof. M. Krishna Gowda-KSOU

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿದ್ಯಾಶಂಕರ್ , ಕರಾಮುವಿ ಉದ್ಯೋಗ ಮೇಳಗಳನ್ನು ಆನ್‌ಲೈನ್‌ ನಲ್ಲೇ ಆಯೋಜಿಸಿ ಯಶಸ್ಸು ಸಾಧಿಸಿದ್ದೇವೆ, ಮುಂದಿನ ದಿನಗಳಲ್ಲಿ ಒಂದು ತಿಂಗಳ ಆನ್‌ಲೈನ್ ಉದ್ಯೋಗ ಮೇಳವನ್ನು ಆಯೋಜಿಸಲು ಖಾಸಗಿ ವಲಯದ ಕಂಪನಿಗಳು ಮುಂದೆ ಬಂದಿವೆ. ಆದ್ದರಿಂದ ನಮ್ಮ ಉದ್ದೇಶ ಕೇವಲ ಶಿಕ್ಷಣಕ್ಕಾಗಿ ಅಲ್ಲದೆ ನಿರುದ್ಯೋಗವಂತರನ್ನು ಸಹ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯನಿರತರಾಗಿದ್ದೇವೆ, ಕೌಶಲ್ಯ ತರಬೇತಿಯನ್ನು ಈಗಾಗಲೇ ಪ್ರಾರಂಭಿಸಲಾಗಿದೆ, ಕೆಎಸ್‌ಒಯು ವಿದ್ಯಾರ್ಥಿಗಳೇ ಅಲ್ಲದೆ ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಈ ಉದ್ಯೋಗಮೇಳದ ಪ್ರಯೋಜನ ಪಡೆಯಬೇಕು ಎಂದರು.

ಕರಾಮುವಿ ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಮಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಕರಾಮುವಿ ಪ್ರಾಧ್ಯಾಪಕ ಡಾ.ಶೆಲ್ವಪಿಳ್ಳೈ ಇದ್ದರು.

Key words: Positive -readings -will definitely – success – Prof. M. Krishna Gowda-KSOU