ಬಿಎಸ್ ವೈ ಸರ್ಕಾರ ಬೀಳಿಸಲು ಹೆಚ್.ಡಿಕೆ  ಹೊರಟಿದ್ದಾರೆ-ಹೀಗೆ ಆರೋಪ ಮಾಡಿದ್ದು ಯಾರು ಗೊತ್ತೆ….?

ಕಲ್ಬುರ್ಗಿ,ಫೆ,7,2020(www.justkannada.in):  ಈ ಹಿಂದೆ ಹೆಚ್.ಡಿ ಕುಮಾರಸ್ವಾಮ, ಹೆಚ್.ಡಿ ದೇವೇಗೌಡರು  ಬಿಎಸ್ ವೈ ಸರ್ಕಾರ ಬೀಳಲು ಬಿಡಲ್ಲ ಎಂದಿದ್ದರು . ಆದ್ರೆ ಈಗ ಬಿಎಸ್ ವೈ ಸರ್ಕಾರ ಬೀಳಿಸಲು ಹೆಚ್.ಡಿಕೆ ಹೊರಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಕಲ್ಬುರ್ಗಿಯಲ್ಲಿ  ಇಂದು ಮಾತನಾಡಿದ ಸಿದ್ದರಾಮಯ್ಯ, ಹೆಚ್ಡಿಕೆ ಜೊತೆ ಮಾತನಾಡದಿರೋದೆ ಒಳ್ಳೆಯದು. ಅವರು ಯಾವಾಗ ಏನು ಮಾತನಾಡ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಪ್ರಮಾಣ ವಚನಸ್ವೀಕರಿಸಿದವರು ನನ್ನ ಸ್ನೇಹಿತರಲ್ಲ. ಅವರು ನನ್ನ ಸ್ನೇಹಿತರಾಗಿದ್ರೆ ಕಾಂಗ್ರೆಸ್ ಬಿಟ್ಟು ಹೋಗುತ್ತಿರಲಿಲ್ಲ.  ಒಂದು ಪಕ್ಷದಿಂದ ಗೆದ್ದು ಮತ್ತೊಂದು ಪಕ್ಷಕ್ಕೆ ಹೋಗಿದವರನ್ನ ಪಕ್ಷಾಂತರಿಗಳು ಎಂತಲೇ ಕರೆಯುತ್ತಾರೆ. ಪಕ್ಷಾಂತರಿ ಮಾಡಿ ಗೆದ್ದರೂ ಅವರು ಪಕ್ಷಾಂತರಿಗಳೇ ಎಂದು ಸಿದ್ಧರಾಮಯ್ಯ ಹೇಳಿದರು.

ಸಿಎಂ ಬಿಎಸ್ ಯಡಿಯೂರಪ್ಪ ದುರ್ಬಲ ಮುಖ್ಯಮಮಂತ್ರಿ.  ಕೇಂದ್ರದ ಬಳಿಕ ಅನುದಾನ ಕೇಳುವ ಧೈರ್ಯ ಇಲ್ಲ. ಮೋದಿ ಮತ್ತು ಅಮಿತ್ ಶಾ ಮುಂದೆ ಬಿಎಸ್ ವೈ  ಬೇಡಿಕೆ ಇಡಲು ಹೆದರ್ತಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words: HD kumaraswamy -try- fall-BS yeddyurappa- government