ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು- ಸ್ವಚ್ಚ ಮೇವ ಜಯತೆ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್ ಕಿವಿಮಾತು..

ಮಂಡ್ಯ,ಜೂ,11,2019(www.justkannada.in): ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು. ಪ್ರತಿ ವಿಚಾರದಲ್ಲೂ ತಮ್ಮ ಕರ್ತವ್ಯ ಏನೆಂಬುದನ್ನು ಪ್ರತಿಯೊಬ್ಬರು ತಿಳಿಯಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕಿವಿಮಾತು ಹೇಳಿದರು.

ಇಂದು ನಡೆದ ಸ್ವಚ್ಚ ಮೇವ ಜಯತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್. ಅದರಲ್ಲೂ ಸ್ವಚ್ಚತೆ, ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿರೋದು ತುಂಬಾ ಖುಷಿ. ರಸ್ತೆ ಚರಂಡಿ ಬಗ್ಗೆ ಮಾತನಾಡ್ತೀವಿ. ಆದ್ರೆ ಪರಿಸರ ನೀರಿನ ಬಗ್ಗೆ ಮಾತನಾಡಲ್ಲ. ಹುಟ್ಟಿದಾಗನಿಂದ ಸಾಯುವವರೆಗೂ ಜೀವಂತವಾಗಿ ನೋಡಿಕೊಳ್ಳೋದು ಪ್ರಕೃತಿ ಪ್ರಕೃತಿ ಕಾಪಾಡದಿದ್ದರೇ ಮನುಕುಲ ನಾಶ ಎಂದರು.

ನಮ್ಮ ಪರಿಸರವನ್ನ ನಾವು ಕಾಪಾಡಿದರೆ ಪರಿಸರ ನಮ್ಮನ್ನ ಕಾಪಾಡುತ್ತೆ. ಅಭಿವೃದ್ದಿಗಾಗಿ ಮರಗಿಡ ಕಡಿದರೆ ಅದರಿಂದಾಗುವ ಅನಾನುಕೂಲ ಏನೆಂಬುದನ್ನ ತಿಳಿಯಬೇಕು. ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಮುಂದಾಗಬೇಕು. ಉತ್ತರ ಕರ್ನಾಟಕದಲ್ಲಿ ಒಂದು ಕೊಡ ನೀರಿಗಾಗಿ ಕಿಲೋಮೀಟರ್ ದೂರ ಹೋಗಬೇಕಿದೆ. ಇದರ ಜವಾಬ್ದಾರಿ ಪ್ರತಿಯೋಬ್ಬರ ಮೇಲಿದೆ. ಕೆಲಸದಾಕೆ ಬರಲಿಲ್ಲ ಅಂತ ನಮ್ಮ‌ಮನೆ ಕ್ಲೀನ್ ಮಾಡಿಕೊಳ್ಳುವಂತೆ. ಯಾರು ಮಾಡಲಿ ಬಿಡಲಿ ನಮ್ಮ ಪರಿಸರವನ್ನ ನಾವು ಉಳಿಸಬೇಕಿದೆ. ಪ್ರತಿ ಮಾತಿನಲ್ಲೂ ಜೈ ಹಿಂದ್ ಜೈ ಕರ್ನಾಟಕ ಮಾತನ್ನು ಪ್ರತಿ ಹಂತದಲ್ಲೂ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಜೀವಂತವಾಗಿರಲು ಪ್ರಕೃತಿಯನ್ನೇ ಉಳಿಸದಿದ್ದರೇ  ಕೋಟಿಗಟ್ಟಲೇ ಆಸ್ತಿ ಏನ್ ಮಾಡುತ್ತೆ..? ಎಂದು ಪ್ರಶ್ನಿಸಿದ ಸುಮಲತಾ ಅಂಬರೀಶ್, ಪ್ರವಾಸಿ ತಾಣಗಳ ಸುತ್ತಮುತ್ತಲೂ ಪರಿಸರ ಹಾನಿಯಾಗುತ್ತಿದೆ. ಯುವ ಶಕ್ತಿ ಮುಂದೆ ಯಾವ ಸರ್ಕಾರಗಳು ಏನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಸರದ ಬಗ್ಗೆ ಯುವಶಕ್ತಿ ಕಾಳಜಿ ವಹಿಸಬೇಕು.ಪ್ರತಿ ವಿಚಾರದಲ್ಲೂ ತಮ್ಮ ಕರ್ತವ್ಯ ಏನಂಬುದನ್ನ ಪ್ರತಿಯೊಬ್ಬರು ತಿಳಿಯಬೇಕು. ಇನ್ನು ನನ್ನನ್ನ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ. ನಿಮಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.

Key words: Young people should take care of the environment-Sumalatha Ambarish

#SumalathaAmbarish #Youngpeople  #environment