ಸೆನ್ಸಾರ್ ಮುಗಿಸಿದ ‘ಪಾಪ್ ಕಾರ್ನ್ ಮಂಕಿ ಟೈಗರ್’..! ಶಿವರಾತ್ರಿಯಂದು ಬಿಡುಗಡೆಗೆ ಸಜ್ಜು

ಬೆಂಗಳೂರು, ಫೆಬ್ರವರಿ 08, 2020 (www.justkannada.in); ಶಿವರಾತ್ರಿಯಂದು ಬಿಡುಗಡೆಗೆ  ಮಂಕಿ ಟೈಗರ್ ಸಜ್ಜಾಗಿದೆ. ಫೆ.21ಕ್ಕೆ ರಾಜ್ಯಾದ್ಯಂತ ಮಂಕಿ ಮಾದೇವ ಅಬ್ಬರಿಸಲಿದ್ದಾನೆ.

ಸುಕ್ಕಾ ಸೂರಿ ಹಾಗೂ ಡಾಲಿ ಧನಂಜಯ್ ಕಾಂಬಿನೇಷನ್‍ನಾ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸೆನ್ಷೆಷಿನಲ್ ಕ್ರಿಯೆಟ್ ಮಾಡಿದೆ. ಟೀಸರ್ ಮೂಲಕ ಸೌತ್ ಇಂಡಿಯಾದಲ್ಲಿ ಬಿಗ್ ಟಾಕ್ ಕ್ರಿಯೆಟ್ ಮಾಡಿರುವ ಮಂಕಿಟೈಗರ್ ಇದೀಗಾ ಸೆನ್ಸಾರ್ ಮುಗಿಸಿ ಮಹಾಶಿವರತ್ರಿಯಂದು ಬೆಳ್ಳಿತೆರೆಯಲ್ಲಿ ಅಬ್ಬರಿಸಲು ಸಜ್ಜಾಗಿದೆ.

ಇದೇ ಫೆಬ್ರವರಿ 21ಕ್ಕೆ ರಾಜ್ಯಾದ್ಯಂತ ತೆರೆಗೆ ಬರುವುದಾಗಿ ಘೋಷಣೆ ಮಾಡಿದೆ. ಟಗರು ಚಿತ್ರದಲ್ಲಿ ಪ್ರೇಕ್ಷಕರ ಮೋಡಿ ಮಾಡಿದ್ದ ಈ ಜೋಡಿ ಇದೀಗಾ ಮಂಕಿಟೈಗರ್ ಮೂಲಕ ಪ್ರೇಕ್ಷರ ರಂಜಿಸಲು ಸಜ್ಜಾಗಿದೆ. ಚಿತ್ರ ಚಿತ್ರೀಕರಣದ ಕೆಲ ದೃಶ್ಯಾವಳಿಗಳು ವೈರಲ್ ಆಗಿದ್ದು ಸಕತ್ ಕ್ಯೂರಿಯಾಸಿಟಿ ಉಂಟುಮಾಡಿದೆ. ಡಾಲಿ ಧನಂಜಯ್ ರಗಡ್ ಲುಕ್, ತಲೆಯಲ್ಲಿ ಮಂಕಿ ಎಂದು ತಿದ್ದಿಸಿಕೊಳ್ಳುತ್ತಿರುವ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳ ಎದೆ ಝಲ್ ಎನ್ನುವಂತೆ ಮಾಡಿದೆ.

ಈ ಚಿತ್ರದಲ್ಲಿ ಡಾಲಿ ಧನಂಜಯ ಜೊತೆಗೆ ನಿವೇದಿತಾ ಸ್ಮಿತಾ, ಅಮೃತಾ ಐಯ್ಯಂಗಾರ್, ಸಪ್ತಮಿ, ಕಾಕ್ರೋಚ್ ಸುಧೀ, ಪೂರ್ಣಚಂದ್ರ ತೇಜಸ್ವಿ, ಮೌನೀಶ ನಾಡಿಗೇರ್ ಸೇರಿದಂತೆ ಅದ್ಧೂರಿತಾರಾಗಣವೇ ಇದೆ. ಚಿತ್ರಕ್ಕೆ ಸುಧೀರ್ ಕೆ.ಎಮ್ ಬಂಡವಾಳ ಹೂಡಿದ್ದಾರೆ. ಸುಧೀರ್ ಮೋಹನ್ ಫಿಲಂಸ್ ಮತ್ತು ಪುಷ್ಕರ್ ಫಿಲಂಸ್ ಜಂಟಿ ವಿತರಣೆಯಲ್ಲಿ ದೇಶದಾದ್ಯಂತ ಚಿತ್ರವನ್ನ ವಿತರಿಸ್ತಿದ್ದಾರೆ.

ಇನ್ನ, ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಮಾದೇವ.. ಮಾದೇವ.. ಹಾಡು ಈಗಾಗಲೇ ಕೇಳುಗರ ಬಾಯಲ್ಲಿ ಗುನುಗುವಂತೆ ಮಾಡಿದೆ. ದಿನದಿಂದ ದಿನದಿನಕ್ಕೆ ಸಕತ್ ಕ್ಯೂರಿಯಾಸಿಟಿ ಹುಟ್ಟುಹಾಕಿರುವ ಮಂಕಿಟೈಗರ್.. ಒಂದು ಪಕ್ಕಾ ಮಾಸ್ ಮನರಂಜನೆಯ ಸಿನಿಮಾ ಎನ್ನುವುದರಲ್ಲಿ ಯಾವುದೇ ಡೌಟೇಇಲ್ಲ. ಸದ್ಯದಲ್ಲೆ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಹೇಳಿರುವ ಸಿನಿಮಾ ತಂಡ.. ಶಿವರಾತ್ರಿಯಂದು ಮಾದೇವನ ಜಪ ಮಾಡಲು ಬೆಳ್ಳಿತೆರೆ ಮೇಲೆ ಬರುವುದಾಗಿ ತಿಳಿಸಿದ್ದಾರೆ.