ಆರ್’ಸಿಬಿ ಗೆಲುವಿಗಾಗಿ ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು

ಬೆಂಗಳೂರು. ಸೆಪ್ಟೆಂಬರ್ 29, 2021 (www.justkannada.in): ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನಕ್ಕೆ ಆರ್ಸಿಬಿ ಫ್ಯಾನ್ಸ್‌ಗಳು ತೆರಳಿ ತಾಯಿಗೆ ಪೂಜೆ ಸಲ್ಲಿಸಿ ಈ ಬಾರಿ ಆರ್ ಸಿಬಿ ಕಪ್ ಗೆಲ್ಲಿಸುವಂತೆ ಪ್ರಾರ್ಥಿಸಿದ್ದಾರೆ.

ಚಾಮುಂಡಿ ಬೆಟ್ಟದ ಗೋಪುರದ ಬಳಿ ಆರ್ಸಿಬಿ ಬಾವುಟ ಹಾರಿಸಿ ನಾಡ ದೇವತೆಗೆ ಕರ್ಪೂರ ಬೆಳಗಿ ತೆಂಗಿನ ಕಾಯಿ ಹೊಡೆದು ಈ ಸಲ ಕಪ್ ನಮ್ದೆ ಎಂದು ಕೂಗುತ್ತ ಪೂಜೆ ಸಲ್ಲಿಸಿದ್ದಾರೆ ಅಭಿಮಾನಿಗಳು ಈ ವಿಡೀಯೋ ಸಾಕಷ್ಟು ವೈರಲ್ ಕೂಡ ಆಗಿದೆ.

ಆರ್ಸಿಬಿ ಫ್ಲ್ಯಾಗ್ ಹಿಡಿದು ಮಂಗಳಾರತಿ ಮಾಡಿ ಈಡುಗಾಯಿ ಹೊಡೆದ ಅಭಿಮಾನಿಗಳು ಕೊಯ್ಲಿ ಪಡೆ ಈ ಬಾರಿಯಾದರೂ ಕಪ್ ಗೆಲ್ಲುವಂತೆ ಪ್ರಾರ್ಥನೆ ಮಾಡಿದ್ದಾರೆ.

key words: rcb fans done pooja at mysore chamundi betta