ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಮಾರಣಾಂತಿಕ ಹಲ್ಲೆ.

ಹಾಸನ,ಜೂನ್,17,2023(www.justkannada.in):  ಜಗಳ ಬಿಡಿಸಲು ಬಂದ ಪೊಲೀಸ್ ಕಾನ್ಸ್‌ಟೇಬಲ್ ಮೇಲೆಯೇ  ಕಲ್ಲು ಹಾಗೂ ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹಾಸನದಲ್ಲಿ ನಡೆದಿದೆ.

ಯಸಳೂರು ಪೊಲೀಸ್ ಠಾಣೆಯ ಶರತ್ ಹಲ್ಲೆಗೊಳಗಾದ ಕಾನ್ಸ್‌ಟೇಬಲ್. ಹಾಸನ ಜಿಲ್ಲೆ ಹೊಳೇನರಸೀಪುರ ತಾಲ್ಲೂಕಿನ ಮಳಲಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.  ಹೊಳೆನರಸೀಪುರ ತಾಲ್ಲೂಕಿನ ಕುಂದೂರು ಹೋಬಳಿ ಎಸ್. ಹೊನ್ನೇನಹಳ್ಳಿ ಗ್ರಾಮದ ಶರತ್ ಮೇಲೆ ಹಲ್ಲೆಯಾಗಿದೆ.

ಶರತ್ ತಮ್ಮ ಗ್ರಾಮದ ದೀಪಕ್ ಎಂಬುವವರ ಮಗಳ ಹುಟ್ಟಹಬ್ಬದ ಕಾರ್ಯಕ್ರಮಕ್ಕೆ ಮಳಲಿ ದೇವಸ್ಥಾನಕ್ಕೆ ಶರತ್ ಬಂದಿದ್ದರು. ದೇವಸ್ಥಾನದ ಬಳಿಯಿರುವ ಕನ್ವೆನ್ಷನ್ ಹಾಲ್ ಮುಂಭಾಗ ಚೇತನ್ ಎಂಬ ಯುವಕನಿಗೆ ಗ್ರಾಮದ ಯುವಕರ ಗುಂಪು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ಮಾಡುತ್ತಿತ್ತು. ಈ ವೇಳೆ ಕಾನ್ಸ್‌ ಟೇಬಲ್ ಶರತ್ ಜಗಳ ಬಿಡಿಸಲು ಹೋಗಿದ್ದಾರೆ. ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಯಿಂದಾಗಿ ಕಾನ್ಸ್‌ಟೇಬಲ್ ಶರತ್ ನ್ವೆನ್ಷನ್ ಹಾಲ್‌ ನಲ್ಲೇ ಕುಸಿದು ಬಿದ್ದಿದ್ದು ಅವರನ್ನಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

Key words: police constable – fight –atally- attacked-hassan