Sunday, September 20, 2026

BDA Apartments

ಮೈಸೂರಿನಲ್ಲಿ ಅನಾರೋಗ್ಯದಿಂದ ಪೊಲೀಸ್ ಪೇದೆ ಸಾವು BDA JK_Adv BDA Adv
Home Crime ಮೈಸೂರಿನಲ್ಲಿ ಅನಾರೋಗ್ಯದಿಂದ ಪೊಲೀಸ್ ಪೇದೆ ಸಾವು.

ಮೈಸೂರಿನಲ್ಲಿ ಅನಾರೋಗ್ಯದಿಂದ ಪೊಲೀಸ್ ಪೇದೆ ಸಾವು.

ಮೈಸೂರು,ಆಗಸ್ಟ್,26,2023(www.justkannada.in): ಅನಾರೋಗ್ಯದಿಂದ ಬಳಲುತ್ತಿದ್ದ ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಶಿವಾಜಿ ರಾವ್ (41) ಮೃತಪಟ್ಟ ಪೊಲೀಸ್ ಪೇದೆ. ಶಿವಾಜಿ ರಾವ್ ಬೆಂಗಳೂರಿನ ಕೆಎಸ್ಆರ್ ಪಿ 3ನೇ  ಬೆಟಾಲಿಯನ್ ನಲ್ಲಿದ್ದರು.  ಈ ನಡುವೆ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಗನ್ ಮ್ಯಾನ್ ಆಗಿ ಪೇದೆ ಶಿವಾಜಿ ರಾವ್ ಕರ್ತವ್ಯ ನಿರ್ವಹಿಸುತ್ತಿದ್ಧರು.

ಗಾಲ್ ಬ್ಲಾಡರ್, ಥೈರಾಯಿಡ್ ,ಜಾಂಡಿಸ್  ಸಮಸ್ಯೆಗಳಿಂದ ಬಳಲುತ್ತಿದ್ದ  ಶಿವಾಜಿ ರಾವ್ ಅವರಿಗೆ ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.ಮೈಸೂರಿನಲ್ಲಿ ಅನಾರೋಗ್ಯದಿಂದ ಪೊಲೀಸ್ ಪೇದೆ ಸಾವು death death 1

ನಗರದ ವಿ.ವಿ ಮೊಹಲ್ಲಾದಲ್ಲಿರುವ ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಆಗಮಿಸಿ ಅಂತಿಮ ದರ್ಶನ ಪಡೆದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು.  ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Key words: police constable -dies -illness – Mysore.