Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Front Page ಮೇ 20ರ ಸಾರಿಗೆ ನೌಕರರ ಮುಷ್ಕರ ನಿರ್ಬಂಧ ಕೋರಿ ಹೈಕೋರ್ಟ್ ಗೆ PIL

ಮೇ 20ರ ಸಾರಿಗೆ ನೌಕರರ ಮುಷ್ಕರ ನಿರ್ಬಂಧ ಕೋರಿ ಹೈಕೋರ್ಟ್ ಗೆ PIL

ಬೆಂಗಳೂರು,ಮೇ,18,2026 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೇ 20ರಂದು ಸಾರಿಗೆ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು ಇದನ್ನು ನಿರ್ಬಂಧಿಸಿ ಕೋರಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ.

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸುದ್ದಿಗುಂಟೆಪಾಳ್ಯದ ವೇದಾವತಿ ಲಕ್ಕಸಂದ್ರದ ಶ್ರೀಧರ ಎಂಬುವವರು ಹೈಕೋರ್ಟ್ ಗೆ  ಪಿಐಎಲ್ ಸಲ್ಲಿಸಿದ್ದಾರೆ.   KESMA ಅಡಿ ಜಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರ ನಿರ್ಬಂಧಿಸಲಾಗಿದೆ. 2025 ಜುಲೈ 18ರ ಕಾರ್ಮಿಕ ಆಯುಕ್ತರ ಸಂಧಾನ ಪ್ರಕ್ರಿಯೆ ಮುಂದುವರಿದಿದೆ.  ರಾಜಿ ಸಂಧಾನದ ಮುಂದಿನ ವಿಚಾರಣೆ ಮೇ 25ಕ್ಕೆ ನಿಗದಿಯಾಗಿದೆ. ಈ ಮಧ್ಯೆ ಮುಷ್ಕರ ನಡೆಸುವುದು ಕಾನೂನು ಬಾಹಿರವೆಂದು ಪಿಐಎಲ್ ನಲ್ಲಿ ಉಲ್ಲೇಖವಾಗಿದೆ.

14 ದಿನಗಳ ನೋಟಿಸ್ ಬದಲು ಮುಷ್ಕರಕ್ಕೆ 7 ದಿನಗಳ ನೋಟಿಸ್ ನೀಡಲಾಗಿದೆ. ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗಳೂ ಇದೇ ಅವಧಿಯಲ್ಲಿ ನಿಗದಿಯಾಗಿವೆ. ಹೀಗಾಗಿ ಸಾರಿಗೆ ನೌಕರರ ಮುಷ್ಕರ ನಿರ್ಬಂಧಿಸಲು ಮನವಿ ಮಾಡಿದ್ದಾರೆ.ಮೇ 20ರ ಸಾರಿಗೆ ನೌಕರರ ಮುಷ್ಕರ ನಿರ್ಬಂಧ ಕೋರಿ ಹೈಕೋರ್ಟ್ ಗೆ PIL jk02_new jk02 new

Key words: PIL, High Court, transport, workers, strike