ರಾಮಮಂದಿರ ವಿಚಾರದಲ್ಲಿ ನಾಲಿಗೆ ಹರಿಬಿಟ್ಟ ಪಿಎಫ್ ಐ ಕಾರ್ಯದರ್ಶಿ…

ಮಂಗಳೂರು,ಫೆಬ್ರವರಿ, 19,2021(www.justkannada.in): ರಾಮಮಂದಿರ  ನಿರ್ಮಾಣ ವಿಚಾರದಲ್ಲಿ ಪಿಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್ ನಾಲಿಗೆ ಹರಿಬಿಟ್ಟಿದ್ದಾರೆ.jk

ಮಂಗಳೂರಿನ ಉಲ್ಲಾಳದಲ್ಲಿ ಮಾತನಾಡಿರುವ ಪಿಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್,  ಅದು ರಾಮಮಂದಿರ ಅಲ್ಲ. ಆರ್ ಎಸ್ ಎಸ್ ಮಂದಿರ. ರಾಮಮಂದಿರ ನಿರ್ಮಾಣಕ್ಕೆ ಒಂದು ಪೈಸೆಯನ್ನೂ ಕೊಡಬೇಡಿ ಎಂದು ಹೇಳಿಕೆ ನೀಡಿ ವಿವಾದ ಸೃಷ್ಠಿಸಿದ್ದಾರೆ.

ದೇಶದಲ್ಲಿರುವ ಆರ್ ಎಸ್ ಎಸ್ ಕ್ಯಾನ್ಸರ್ ಇದ್ದಂತೆ. ಅದು ವಾಸಿ ಆಗಲ್ಲ. ಪಿಎಫ್ ಐಗೆ ಶತ್ರು ಅಂದ್ರೆ ಆರ್ ಎಸ್ ಎಸ್. ದೇಶದಲ್ಲಿ ಶಾಂತಿ ಕದಡುವ ಕೆಲಸವನ್ನ ಆರ್ ಎಸ್ ಎಸ್ ಮಾಡುತ್ತಿದೆ ಎಂದು ಪಿಎಫ್ ಐ ಕಾರ್ಯದರ್ಶಿ ಅನೀಸ್ ಅಹ್ಮದ್  ಹೇಳಿದ್ದಾರೆ.

Key words:  PFI -secretary –anis ahamad-mangalore- Ram Mandir.