ಬೆಂಗಳೂರಿನ 117 ಸ್ಮಶಾನ ಕಾರ್ಮಿಕರ ಸೇವೆ ಖಾಯಂ-  ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಜನವರಿ,11,2023(www.justkannada.in):  ಬೆಂಗಳೂರಿನಲ್ಲಿ 117 ಸ್ಮಶಾನ ಕಾರ್ಮಿಕರನ್ನು ಸೇವೆಯಲ್ಲಿ ಖಾಯಂ ಮಾಡಲಾಗಿದೆ. ಉಳಿದ 100 ಜನರಿಗೆ ಖಾಯಂ ನೇಮಕಾತಿ ಆದೇಶ ಹೊರಡಿಸುತ್ತೇವೆ  ಎಂದು  ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಂಗಳೂರು ಸ್ಮಶಾನ ಕಾರ್ಮಿಕರ ಜತೆ  ಸಿಎಂ ಬಸವರಾಜ ಬೊಮ್ಮಾಯಿ ಉಪಾಹಾರ ಸೇವಿಸಿದರು. ನಂತರ ಮಾತನಾಡಿದ ಅವರು, ಸ್ಮಶಾನ ಕಾರ್ಮಿಕರನ್ನ ಸತ್ಯಹರಿಶ್ಚಂದ್ರ ಬಳಗ ಎಂದು ಕರೆಯಬೇಕು.  ನಾನು ಒಂದು ದಿನ ಕಾರ್ಮಿಕರ ಸಮಸ್ಯೆ ಕೇಳಿದ್ದೇನೆ. ಕಾರ್ಮಿಕರ ಸಮಸ್ಯೆ ಕೇಳಿ ಸೌಲಭ್ಯ ಕೊಡುವ ನಿರ್ಣಯ ಮಾಡಿದೆ. ಇಷ್ಟು ವರ್ಷ ಸ್ಮಶಾನ ಕಾರ್ಮಿಕರ ಕಷ್ಟಗಳನ್ನು ಯಾವ ಸರ್ಕಾರಗಳೂ ಆಲಿಸಿರಲಿಲ್ಲ. ಅವರ ನೋವಿಗೆ ಸ್ಪಂದಿಸಿರಲಿಲ್ಲ, ರಾಜ್ಯ ಆಳುವರಾಗಲಿ ಅಧಿಕಾರಿಯೇ ಆಗಲಿ ಇವರ ಕಡೆ ತಿರುಗಿ ನೋಡಲಿಲ್ಲ. ಇದು ಬಡವರ ಪರ ಕಾಳಜಿ ಇರುವಂತಹ ಸರ್ಕಾರ ಎಂದರು.

ಸ್ಮಶಾನ ಕಾರ್ಮಿಕರನ್ನು ಹರಿಶ್ಚಂದ್ರ ಗೆಳೆಯರ ಬಳಗ ಎಂದು ಇನ್ನು ಮುಂದೆ ಕರೆಯಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ ಸಿಎಂ ಬೊಮ್ಮಾಯಿ, ಕಾರ್ಮಿಕರು ಸತ್ಯಹರಿಶ್ಚಂದ್ರ ಪ್ರತಿಮೆಯನ್ನು ನೀಡಿದ್ದಾರೆ. ಆ ಪ್ರತಿಮೆಯನ್ನ ನಾನು ದೇವರ ಮನೆಯಲ್ಲಿ ಇಡುತ್ತೇನೆ ಎಂದು ಹೇಳಿದರು.

Key words: Permanent -service -117 graveyard -workers – Bangalore- CM- Basavaraja Bommai