ಶಾಸಕರೊಬ್ಬರ ಕಾರು ಡಿಕ್ಕಿಯಾಗಿ ವೃದ್ಧೆ ಸಾವು.

ಕೊಪ್ಪಳ,ಜನವರಿ,11,2023(www.justkannada.in): ಕನಕಗಿರಿ ಶಾಸಕ ಬಸವರಾಜ ದಡೇಸುಗೂರು ಅವರ ಕಾರು ಡಿಕ್ಕಿಯಾಗಿ ವೃದ್ಧೆ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ.

ಕಾರಟಗಿ ಮೈಲಾಪುರ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಮರಿಯಮ್ಮ ನಾಯಕ(70) ಮೃತಪಟ್ಟ ವೃದ್ಧೆ.  ಮರಯಮ್ಮ ರಸ್ತೆ ದಾಟುತ್ತಿದ್ದರು. ಈ ವೇಳೆ ಶಾಸಕ ದಡೇಸುಗೂರು ಅವರ ಕಾರು ನಾಯಿಗೆ ಡಿಕ್ಕಿಯಾಗುವುದನ್ನ ತಪ್ಪಿಸಲು ಹೋಗಿ ವೃದ್ಧೆಗೆ ಡಿಕ್ಕಿಯಾಗಿದೆ.

ತಕ್ಷಣ ವೃದ್ಧೆಯನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಕುರಿತು ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words:  MLA’s -car -collides – old woman’s –death-karatagi