ಸಿಎಂ ಬಿಎಸ್ ವೈಗೆ ಕೊರೋನಾ ಭೀತಿ..?  ಗೃಹ ಕಚೇರಿ ಕೃಷ್ಣಾದ ಎಲೆಕ್ಟ್ರಿಷಿಯನ್ ಹಾಗೂ ಸಿಬ್ಬಂದಿಗೆ ಕೊರೋನಾ ಸೋಂಕು…

ಬೆಂಗಳೂರು,ಜು,10,2020(www.justkannada.in):  ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲೆಕ್ಟ್ರಿಷಿಯನ್, ಬದಲಿ ವಾಹನ ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಗೃಹ ಕಚೇರಿ ಕೃಷ್ಣಾದ ಎಲೆಕ್ಟ್ರಿಷಿಯನ್, ಬದಲಿ ವಾಹನ ಚಾಲಕ ಹಾಗೂ ಮತ್ತೊಬ್ಬ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸಿಎಂ ಗೃಹಕಚೇರಿ ಅಧಿಕೃತವಾಗಿ ತಿಳಿಸಿದ್ದು ಈ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪಗೆ ಆತಂಕ ಹೆಚ್ಚಾಗಿದೆ.cm-bs-yeddyurappa-corona-electrician-krishna-house

ಬದಲಿ ವಾಹನ ಚಾಲಕ ಸಿಎಂ ಬಿಎಸ್ ವೈ ಅವರ ನೇರ ಸಂಪರ್ಕಕ್ಕೆ ಬರುವುದಿಲ್ಲ. ಎಲೆಕ್ಟ್ರಿಷಿಯನ್ ಸಹ ಸಂಪರ್ಕಕ್ಕೆ ಬರಲ್ಲ. ಇನ್ನು ದವಳಗಿರಿ ನಿವಾಸದ ಸಿಬ್ಬಂದಿಗೂ ಕೊರೋನಾ ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸದ್ಯ ಸಿಎಂ ಬಿಎಸ್ ಯಡಿಯೂರಪ್ಪ ಮನೆಯಲ್ಲೇ ಉಳಿದಿದ್ದು  ಅಧಿಕೃತವಾಗಿ ಯಾವುದೇ ಕಾರ್ಯಕ್ರಮ ರದ್ಧಾಗಿಲ್ಲ. ಇನ್ನು ಕೊರೋನಾ ಸೋಂಕು ಹಿನ್ನೆಲೆ ಗೃಹ ಕಚೇರಿ ಕೃಷ್ಣಾಗೆ ಸ್ಯಾನಿಟೈಸ್ ಮಾಡಲಾಗಿದೆ.

Key words: CM BS yeddyurappa- Corona – electrician – Krishna house