ದೇಶದಲ್ಲಿ ಕೊರೋನಾ ಅಟ್ಟಹಾಸ:  ಒಂದೇ ದಿನ 26,506 ಮಂದಿಗೆ  ವಕ್ಕರಿಸಿದ ಸೋಂಕು..

ನವದೆಹಲಿ,ಜು,10,2020(www.justkannada.in):  ದೇಶದಲ್ಲಿ ಕೊರೋನಾ ಮಹಾಮಾರಿ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು ಈ ನಡುವೆ ಇಂದು ಒಂದೇ ದಿನ 26,506 ಮಂದಿಗೆ ಕೊರೋನಾ ಸೋಂಕು ತಗುಲಿದೆ.jk-logo-justkannada-logo

ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ಒಂದೇ ದಿನ 26,506 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 7,93,802ಕ್ಕೆ ಏರಿದೆ.  ಹಾಗೆಯೇ 24 ಗಂಟೆಗಳಲ್ಲಿ 475 ಮಂದಿ ಕೊರೋನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ 21,604ಕ್ಕೆ ತಲುಪಿದೆ.26506-people-infected-corona-country-single-day

ಈವರೆಗೆ 4,95,513 ಜನ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.   ದೇಶದಲ್ಲಿ ಇನ್ನೂ 2,76,685 ಜನರಲ್ಲಿ ಕೊರೊನಾ ಸಕ್ರೀಯವಾಗಿದೆ.

Key words: 26,506 people- infected- Corona – country- single day.