ವರ್ಗಾವಣೆ ದಂಧೆ ದಾಖಲೆಯ ಪೆನ್ ಡ್ರೈವ್ ಇದೆ: ಸಮಯ ಬಂದಾಗ ಬಿಡುಗಡೆ- ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು,ಜುಲೈ,5,2023(www.justkannada.in): ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ದಾಖಲೆಯ ಪೆನ್ ಡ್ರೈವ್ ನನ್ನ ಬಳಿ ಇದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿಕೆ, ವರ್ಗಾವಣೆ ದಂಧೆ ಬಗ್ಗೆ ನನ್ನ ಬಳಿ ಸಾಕ್ಷ್ಯ ಇದೆ.  ಸಮಯ ಬರಲಿ ಪೆನ್ ಡ್ರೈವ್ ಬಿಡುಗಡೆ ಮಾಡ್ತೀನಿ ಎಂದರು.

ಹೆಚ್ ಡಿಕೆ ಮೈ ಪರಚಿಕೊಳ್ಳುವುದು ಬೇಡ ಎಂದಿದ್ದ ಸಚಿವ ದಿನೇಶ್ ಗುಂಡೂರಾವ್  ವಿರುದ್ದ ಕಿಡಿಕಾರಿದ ಹೆಚ್.ಡಿಕೆ, ಮೈ ಪರಚಿಕೊಳ್ಳಬೇಡಿ ಅಂತಾ ಗುಂಡೂರಾವ್ ಹೇಳಿದ್ದಾರಲ್ಲ ನಾನೇಕೆ ಮೈ ಕೈ ಪರಚಿಕೊಳ್ಳಲಿ ಎಂದರು.

ತಾಜ್ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ ಕುರಿತು ಲೇವಡಿ ಮಾಡಿದ್ದ ರಾಜ್ಯ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಹೆಚ್.ಡಿಕೆ,  ನಾನೇನು ಕೆಎಸ್ ಟಿ ಟ್ಯಾಕ್ಸ್  ಅಂತಾ ಇಟ್ಟುಕೊಂಡಿಲ್ಲ.  ನಾನೇನು ಬೀದಿಯಲ್ಲಿ ಹೋಗುವವನಾ..? 2  ಅಥವಾ 3 ಲಕ್ಷ ಖರ್ಚು ಮಾಡೋ ಯೋಗ್ಯತೆ ಇಲ್ಲವಾ..? ಟೆಂಟ್ ನಲ್ಲಿ ಬ್ಲ್ಯೂ ಫಿಲಂ ತೋರಿಸಿ ಬಂದವನಲ್ಲ ನಾನು..? ರೌಡಿಗಳಿಗೆ ಎಣ್ಣೆ ಸಪ್ಲೆ ಮಾಡಿ ಬಂದವನಲ್ಲ ಎಂದು ಗುಡುಗಿದರು.

Key words: pen drive – transfer –scam- documents-Former CM -H.D kumaraswamy