Sunday, September 20, 2026

BDA Apartments

ವರ್ಗಾವಣೆ ದಂಧೆ ಸಾಕ್ಷ್ಯ ಇದೆ ಎಂದ ಹೆಚ್.ಡಿಕೆಗೆ ಸಿಎಂ ಸಿದ‍್ಧರಾಮಯ್ಯ ತಿರುಗ...
Home Front Page ವರ್ಗಾವಣೆ ದಂಧೆ ಸಾಕ್ಷ್ಯ ಇದೆ ಎಂದ ಹೆಚ್.ಡಿಕೆಗೆ ಸಿಎಂ ಸಿದ‍್ಧರಾಮಯ್ಯ ತಿರುಗೇಟು.

ವರ್ಗಾವಣೆ ದಂಧೆ ಸಾಕ್ಷ್ಯ ಇದೆ ಎಂದ ಹೆಚ್.ಡಿಕೆಗೆ ಸಿಎಂ ಸಿದ‍್ಧರಾಮಯ್ಯ ತಿರುಗೇಟು.

ಬೆಂಗಳೂರು,ಜುಲೈ,5,2023(www.justkannada.in):  ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ದಾಖಲೆಯ ಪೆನ್ ಡ್ರೈವ್ ನನ್ನ ಬಳಿ ಇದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಎಚ್ ಡಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ.  ಕುಮಾರಸ್ವಾಮಿ ದಾಖಲೆ ಇದ್ರೆ ರಿಲೀಸ್ ಮಾಡಲಿ.  ಹೆಚ್.ಡಿಕೆ ಹತಾಶರಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಸದನದಲ್ಲಿ ಉತ್ತರ ಕೊಡುತ್ತೇನೆ ಎಂದರು.

ಸದನ ಆರಂಭವಾಗಿ ಮೂರು ದಿನ ಆಗಿದೆ. ಆದರೆ ಒಬ್ಬ ವಿಪಕ್ಷ ನಾಯಕರನ್ನ ಆಯ್ಕೆ ಮಾಡಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದೀರಾ  ಎಂದು ಬಿಜೆಪಿ ವಿರುದ್ಧ  ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

Key words: CM Siddramaiah –Former CM- HD Kumaraswamy- evidence – transfer racket.