ರಾಜ್ಯ ಸರ್ಕಾರ 2013-23ರ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ- ಮಾಜಿ ಸಿಎಂ ಬೊಮ್ಮಾಯಿ ಆಗ್ರಹ.

ಬೆಂಗಳೂರು,ಜುಲೈ,5,2023(www.justkannada.in):  ರಾಜ್ಯ ಸರ್ಕಾರ ನಿಜವಾಗಲೂ ಭ್ರಷ್ಟಾಚಾರದ ವಿರುದ್ದವಾಗಿದ್ದರೇ 2013-23ರ ಅವಧಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಒಂದುವರೆ  ವರ್ಷದಿಂದ ನಮ್ಮ ವಿರುದ್ಧ 40% ಕಮಿಷನ್ ಆರೋಪ ಮಾಡುತ್ತಿದ್ದಾರೆ . ಆದರೆ ಇಲ್ಲಿವರೆಗೂ ಈ ಬಗ್ಗೆ ಯಾವುದೇ ದಾಖಲೆ ನೀಡಿಲ್ಲ.  40% ಕಮಿಷನ್ ಬಗ್ಗೆ ತನಿಖೆ ಮಾಡಿದ್ರೆ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಆಗಲಿ ಎಂದರು.

ನಮ್ಮ ವಿರುದ್ದ ಆರೋಪ ಮಾಡುವ ರಾಜ್ಯ ಕಾಂಗ್ರೆಸ್ ಸರ್ಕಾರ ನಿಜವಾಗಲೂ ಭ್ರಷ್ಟಾಚಾರದ ವಿರುದ್ದವಾಗಿದ್ದರೇ 2013 -23 ರ ಅವಧಿಯ ಭ‍್ರಷ್ಟಾಚಾರದ ಬಗ್ಗೆ ತನಿಖೆ ಮಾಡಲಿ ಎಂದು ಬೊಮ್ಮಾಯಿ ಸವಾಲು ಹಾಕಿದರು.

Key words: state government-investigate – corruption – period 2013-23- Former CM- Bommai