ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ

ಬೆಂಗಳೂರು, ಸೆಪ್ಟೆಂಬರ್ 25, 2023 (www.justkannada.in): ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿಪಕ್ಷದ ರಾಘವ್​ ಚಡ್ಡಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಉದಯಪುರದ ಲೀಲಾ ಪ್ಯಾಲೇಸ್​ನಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್​ ಚಡ್ಡಾ ಸತಿ-ಪತಿಗಳಾಗಿದ್ದಾರೆ.

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಭಗವಂತ್​ ಮಾನ್​, ಆದಿತ್ಯ ಠಾಕ್ರೆ ಸೇರಿದಂತೆ ಹಲವು ರಾಜಕೀಯ ನಾಯಕರು ಉದಯಪುರದಲ್ಲಿ ರಾಘವ್​ ಚಡ್ಡಾ – ಪರಿಣಿತಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೀಷ್​ ಮಲ್ಹೋತ್ರಾ, ಸಾನಿಯಾ ಮಿರ್ಜಾ, ಹರ್ಭಜನ್​ ಸಿಂಗ್​ ಸೇರಿ ಸಿನಿ ರಂಗದ ಖ್ಯಾತನಾಮರು ಮದುವೆಗೆ ಸಾಕ್ಷಿಯಾಗಿದ್ದರು.

ಅಂದಹಾಗೆ ಮೇ 13ರಂದು ದೆಹಲಿಯಲ್ಲಿ ಪರಿಣಿತಿ ಚೋಪ್ರಾ ಖಾಸಗಿ ಸಮಾರಂಭವೊಂದರಲ್ಲಿ ರಾಘವ್​ ಚಡ್ಡಾರಿಗೆ ಪ್ರಪೋಸ್​ ಮಾಡಿದ್ದರು. ನಿಶ್ಚಿತಾರ್ಥದ ಬಗ್ಗೆ ನಟಿ ಪರಿಣಿತಿ ಚೋಪ್ರಾ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಶೇರ್​ ಮಾಡಿದ್ದರು.