Sunday, September 20, 2026

BDA Apartments

ವಿಶ್ವಕಪ್ ಕ್ರಿಕೆಟ್: ನ್ಯೂಜಿಲ್ಯಾಂಡ್’ಗೆ ಪಾಕಿಸ್ತಾನ ಸವಾಲು ಇಂದು BDA JK_Adv BDA Adv
Home Front Page ವಿಶ್ವಕಪ್ ಕ್ರಿಕೆಟ್: ನ್ಯೂಜಿಲ್ಯಾಂಡ್’ಗೆ ಪಾಕಿಸ್ತಾನ ಸವಾಲು ಇಂದು

ವಿಶ್ವಕಪ್ ಕ್ರಿಕೆಟ್: ನ್ಯೂಜಿಲ್ಯಾಂಡ್’ಗೆ ಪಾಕಿಸ್ತಾನ ಸವಾಲು ಇಂದು

ಬರ್ಮಿಂಗಂ, ಜೂನ್ 26, 2019 (www.justkannada.in): ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಬುಧವಾರ ಪಾಕಿಸ್ತಾನ ತಂಡ ಎದುರಿಸಲಿದೆ.

ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಎದುರಿಸುವುದೇ ಈಗ ಪಾಕ್ ತಂಡದ ಮುಂದಿರುವ ದೊಡ್ಡ ಸವಾಲು. ಕೇನ್ ಬಳಗವು ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯವನ್ನು ಸೋತಿಲ್ಲ.

ಆದರೆ ಐದು ಪಂದ್ಯಗಳನ್ನಾಡಿರುವ ಪಾಕ್ ತಂಡವು ಎರಡರಲ್ಲಿ ಮಾತ್ರ ಗೆದ್ದಿದೆ. ಭಾರತದ ಎದುರು ಮ್ಯಾಂಚೆಸ್ಟರ್‌ನಲ್ಲಿ ಸೋತ ನಂತರ ದಕ್ಷಿಣ ಆಫ್ರಿಕಾ ಎದುರು ಮತ್ತೆ ಗೆಲುವಿನ ಲಯಕ್ಕೆ ಮರಳಿತ್ತು. ಇದರಿಂದಾಗಿ ಕಿವೀಸ್ ಎದುರು ಉತ್ತಮವಾಗಿ ಆಡುವ ಭರವಸೆಯಲ್ಲಿ ಸರ್ಫರಾಜ್ ಅಹಮದ್ ಬಳಗವಿದೆ.