Thursday, August 6, 2026

BDA Apartments

Home Front Page ಚಿತ್ರಕಲಾ ಸ್ಪರ್ಧೆ: ಸ್ಥಳದಲ್ಲೇ ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ..

ಚಿತ್ರಕಲಾ ಸ್ಪರ್ಧೆ: ಸ್ಥಳದಲ್ಲೇ ಚಿತ್ರ ಬಿಡಿಸಿ ಬೈಸಿಕಲ್ ಗೆಲ್ಲಿ..

ಮೈಸೂರು.ಜನವರಿ.23,2024(www.justkannada.in): ಮೈಸೂರು ಫೆಸ್ಟ್ ಕಾರ್ಯಕ್ರಮದ ಪ್ರಯುಕ್ತ “ನಮ್ಮ ಪರಂಪರೆ, ನಿಮ್ಮ ತಾಣ”(“our heritage, your destination) ಮೈಸೂರು ಪ್ರವಾಸೋದ್ಯಮವನ್ನು ಪ್ರತಿಬಿಂಬಿಸುವ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯಿಂದ ಜನವರಿ 27 ರಂದು ಮೈಸೂರು ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ವಿಭಾಗದ ಮುಂಭಾಗ ಬೆಳಗ್ಗೆ 9.30 ರಿಂದ 11.೦೦ ಗಂಟೆವರೆಗೆ ನಡೆಸಲಾಗುತ್ತದೆ.

8 ರಿಂದ 12ನೇ ತರಗತಿಯ ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು https://forms.gle/BbWdJUzv1uFAeuXb8 ಲಿಂಕ್ ನ ಮೂಲಕ ಸಲ್ಲಿಸಬಹುದಾಗಿದ್ದು , ಸ್ಥಳ  ನೋಂದಣಿಗೆ ಅವಕಾಶವಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂರು ಸ್ಪರ್ಧಿಗಳಿಗೆ ಬೈಸಿಕಲ್, ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 7411564510 ಅನ್ನು ಹಾಗೂ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ visit_mysuru ಪೇಜನ್ನು ಫಾಲೋ ಮಾಡಿ ಎಂದು ಮೈಸೂರು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್  ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Painting competition- Draw -picture -on the spot – win – bicycle-mysore