Saturday, October 17, 2026

Dasara Wishes

Happy Dasara
Home Front Page ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ-ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ…

ಗೂಂಡಾಗಳ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ-ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ…

ಹುಬ್ಬಳ್ಳಿ,ಸೆ,7,2019(www.justkannada.in):  ಭ್ರಷ್ಟಾಚಾರ, ಗುಂಡಾಗಳು ಹಾಗೂ ಕೊಲೆಗಡಿಕರಿಗೆ  ರಕ್ಷಣೆ ಸಿಗುತ್ತೆ ಎಂಬ ನಂಬಿಕೆ ದೇಶದಲ್ಲಿತ್ತು. ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ರಕ್ಷಣೆ  ನೀಡುವುದಿಲ್ಲ. ಗುಂಡಾಗಳಿಗ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ, ಯೋಗೀಶ್ ಗೌಡ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಲು ಈ ಸಿಬಿಐಗೆ ನೀಡಲಾಗಿದೆ. ಗೂಂಡಾಗಳಿಗ ಬೆನ್ನಿಗೆ ನಮ್ಮ ಸರ್ಕಾರ ನಿಲ್ಲುವುದಿಲ್ಲ ಎಂದು ಹೇಳಿದರು.

ನಾಳೆ ಮತ್ತು ನಾಡಿದ್ದು ಬೆಳಗಾವಿ ಸುವರ್ಣ ಸೌಧದಲ್ಲಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳ ಸಮಾವೇಶಗಳನ್ನ ಹಮ್ಮಿಕೊಳ್ಳಲಾಗಿದೆ. ಇವತ್ತು ಬೆಳಗಾವಿ, ಚಿಕ್ಕೋಡಿ ವಿಭಾಗದದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ. ನೆರೆ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ  ಕೇಂದ್ರ ಸರ್ಕಾರ ಅಧಿಕಾರಗಳನ್ನು ಕಳಿಸಿ ಸಮೀಕ್ಷೆ ಮಾಡಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ನೇರೆ ಪರಿಹಾರ ಹಣವನ್ನ ಬಿಡುಗಡೆ ಮಾಡುತ್ತೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಹಾವಳಿ ಸಂಬಂಧಿಸಿದಂತೆ ಈಗ ತಾತ್ಕಾಲಿಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನೆರೆ ಪರಿಹಾರ ಶೇ. 99 ಭಾಗ ವಿತರಣೆಯಾಗಿದೆ.ಈಗ ತಾತ್ಕಾಲಿಕ ಸಮಸ್ಯೆ ನಿವಾರಣೆ ಮಾಡಲಾಗಿದೆ.‌ ಮುಂದೆ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವದು ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.

Key words: Our government – not stand -behind –gundas-Minister -KS Eshwarappa