ರಾಜಕಾರಣಕ್ಕಾಗಿ ತಿದ್ಧುಪಡಿ ಮಸೂದೆಗೆ ವಿರೋಧ: ನಾಳೆಯ ಬಂದ್‌ ಗೆ ರೈತರು ಕರೆ ಕೊಟ್ಟಿಲ್ಲ-ಸಚಿವ ಎಸ್.ಟಿ ಸೋಮಶೇಖರ್…

ಮೈಸೂರು,ಸೆಪ್ಟಂಬರ್,27,2020(www.justkannada.in): ಎಪಿಎಂಸಿ ತಿದ್ಧುಪಡಿ ಕಾಯ್ದೆ ವಿಚಾರ, ರೈತರಿಗೆ ಇದರ ಬಗ್ಗೆ ವಿರೋಧ ಇಲ್ಲ. ರೈತಮುಖಂಡರಿಗೆ ಇದರ ಬಗ್ಗೆ ವಿರೋಧವಿದೆ. ರಾಜಕಾರಣಕ್ಕಾಗಿ ತಿದ್ಧುಪಡಿ ಕಾಯ್ದೆ ವಿರೋಧ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಆರೋಪಿಸಿದರು.jk-logo-justkannada-logo

ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್,  ನಾಳೆಯ ಬಂದ್‌ ಗೆ ರೈತರು ಕರೆ ಕೊಟ್ಟಿಲ್ಲ. ಕೆಲವು ಸಂಘಟನೆಗಳು ಬಂದ್‌ ಗೆ ಕರೆ ಕೊಟ್ಟಿವೆ. ಕಾಯ್ದೆಯಿಂದ ರೈತರಿಗೆ ಅನಕೂಲವಾಗಲಿದೆ. ಇದನ್ನು ಸಿಎಂ ಯಡಿಯೂರಪ್ಪ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ರಾಜಕಾರಣಕ್ಕಾಗಿ ಮಸೂದೆಯನ್ನು ವಿರೋಧ ಮಾಡಲಾಗುತ್ತಿದೆ‌. ಪರಿಷತ್‌ನಲ್ಲಿ ಎಪಿಎಂಸಿ ಬಿಲ್ ಮಂಡನೆಯಾಗಿಲ್ಲ. ಅದರ ಬಗ್ಗೆ ಚರ್ಚೆಯೂ ಆಗಿಲ್ಲ ಎಂದರು. opposition-apmc-amendment-act-politics-mysore-minister-st-somashekhar

ಅವಿಶ್ವಾಸ ನಿರ್ಣಯ ಮಂಡನೆ ವಿಚಾರ: ಸಿದ್ಧರಾಮಯ್ಯಗೆ ಟಾಂಗ್….

ರಾಜ್ಯ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಟಾಂಗ್ ನೀಡಿರುವ ಸಚಿವ ಎಸ್.ಟಿ ಸೋಮಶೇಖರ್, ಸಿದ್ದರಾಮಯ್ಯ ಅವರು ಕಾಟಚಾರಕ್ಕೆ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ನಿಜವಾಗಿಯೂ ಸರ್ಕಾರದ ವಿರುದ್ದ ಇದ್ದಿದ್ದರೆ ಗಂಭೀರವಾಗಿ ಪರಿಗಣಿಸಿ ಚರ್ಚೆ ಮಾಡುತ್ತಿದ್ದರು. ಡಿವೈಡ್ ಅಂಡ್ ರೂಲ್ ನಿಯಮದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಬೇಕಿತ್ತು.  ಆದರೆ ಅವರು ಸುಮ್ಮನೆ ಕಾಟಚಾರಕ್ಕೆ ಧ್ವನಿಮತದ ಮೂಲಕ ಕೇಳಿದ್ದಾರೆ.  ಆ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಬೆಲೆ ಇಲ್ಲ ಎಂದು ಟೀಕಿಸಿದರು.

Key words: Opposition –apmc –Amendment- Act- politics-mysore-Minister- ST Somashekhar.