5 ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ: ಯಾವಾಗ ಜಾರಿ, ಷರತ್ತುಗಳೇನು..?  ಸವಿವರ ನೀಡಿದ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಜೂನ್,2,2023(www.justkannada.in):  ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಚಿವರು, ಅಧಿಕಾರಿಗಳ ಜೊತೆ ಸಭೆಯಲ್ಲಿ ಸಿಎಂ ಸಿದ‍್ಧರಾಮಯ್ಯ  ಚರ್ಚೆ ನಡೆಸಿದರು.

ಬಳಿಕ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಪಂಚ ಗ್ಯಾರಂಟಿ  ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದರು. 5 ಗ್ಯಾರಂಟಿ ಜಾರಿಗೆ ಸಂಫುಟ ಸಭೆಯಲ್ಲಿ ಒಪ್ಪಿಗೆ ನೀಡಿದ್ದೇವೆ.  ಮೊದಲ ಸಂಫುಟ ಸಭೆಯಲ್ಲಿ ಗ್ಯಾರಂಟಿ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದ್ದವು.   ಯಾವುದೇ ಜಾತಿ ಧರ್ಮವಿಲ್ಲದೇ ಪ್ರತಿಯೊಬ್ಬರಿಗೂ ಜಾರಿ ಮಾಡುತ್ತೇವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಜಾರಿಗೆ ನಿರ್ಧಾರ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ.

ಮೊದಲ ಗ್ಯಾರಂಟಿ ಗೃಹಜ್ಯೋತಿ ಜಾರಿಗೆ ನಿರ್ಧರಿಸಲಾಗಿದೆ.  ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ ನೀಡುತ್ತೇವೆ. ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್​ ವಿದ್ಯುತ್​ ಉಚಿತವಾಗಿ ನೀಡಲಾಗುವುದು. ಯಾರು 200 ಯುನಿಟ್​ ಒಳಗಡೆ ವಿದ್ಯುತ್​ ಬಳಸುತ್ತಾರೆ ಅವರು ಬಿಲ್​ ಕಟ್ಟಬೇಕಿಲ್ಲ. 12 ತಿಂಗಳ  ಅವರೇಜ್ ವಿದ್ಯುತ್ ಬಳಕೆ ಮೇಲೆ 10%  ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡುತ್ತೇವೆ. ಜುಲೈ 1ರಿಂದ ಆಗಸ್ಟ್ 1ಕ್ಕೆ ಬಳಸುವ ವಿದ್ಯುತ್ ಬಳಕೆಗೆ ಬಿಲ್ ನೀಡಲಾಗುತ್ತದೆ ಎಂದು ಸಿಎಂ ಸಿದ‍್ಧರಾಮಯ್ಯ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ

ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ  ನೀಡುತ್ತೇವೆ. ಅಕೌಂಟ್ ​​ಗೆ ತಿಂಗಳಿಗೆ 2000 ಸಾವಿರ ರೂ. ಹಾಕುತ್ತವೇ. ಹೀಗಾಗಿ ಅವರು ಅರ್ಜಿ ಸಲ್ಲಿಸಬೇಕು. ಜೂನ್​ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯಾವಕಾಶ ನೀಡಲಾಗುವುದು.  ಜುಲೈ 15ರಿಂದ ಆಗಸ್ಟ್ 15ರವರೆಗೆ ಪರಿಶೀಲನೆ ನಡೆಸುತ್ತೇವೆ. ಆಗಸ್ಟ್ 15 ರಂದು ಗೃಹಲಕ್ಷ್ಮಿ ಯೋಜನೆ ಲಾಂಚ್ ಮಾಡುತ್ತೇವೆ. ಮನೆ ಯಜಮಾನಿ ಕಡ್ಡಾಯವಾಗಿ ಆಧಾರ್​ ಕಾರ್ಡ್​​, ಬ್ಯಾಂಕ್​ ಅಕೌಂಟ್​ ಪಾಸ್​ ಬುಕ್​ ಜೆರಾಕ್ಸ್​ ನೀಡಬೇಕು. ಎಪಿಎಲ್​ ಮತ್ತು ಬಿಪಿಎಲ್​​ ಕಾರ್ಡ್​ದಾರರಿಗೂ ಕೂಡ ಈ ಯೋಜನೆ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ಧಾರೆ.

ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ 10 ಕೆಜಿ ಅಕ್ಕಿ

ಜುಲೈ 1 ರಿಂದ ಬಿಪಿಎಲ್​ ಮತ್ತು ಅಂತ್ಯೋದಯ ಕಾರ್ಡ್​ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಜೂ.11ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಶಕ್ತಿಯೋಜನೆಯಡಿ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಮಹಿಳೆಯರಿಗೆ ಫ್ರಿ ಬಸ್ ಪಾಸ್ ಇದೇ ತಿಂಗಳು 11ರಿಂದ ಉಚಿತ ಬಸ್ ಪ್ರಯಾಣ ಜಾರಿಯಾಗಲಿದೆ.  ರಾಜ್ಯದ ಯಾವ ಭಾಗಕ್ಕಾದರೂ ಪ್ರಯಾಣ ಮಾಡಬಹುದು. ಯಾವುದೇ ಮಿತಿ ಇಲ್ಲ. ಎಸಿ , ಎಸಿ ಸ್ಲೀಪರ್ ಬಸ್ ಗಳಲ್ಲಿ ಅವಕಾಶವಿಲ್ಲ ಎಂದು ಸಿಎಂ ಸಿದ‍್ಧರಾಮಯ್ಯ ತಿಳಿಸಿದರು.

ಯುವನಿಧಿ ಜಾರಿ, ಪಧವಿದದರಿಗೆ 3 ಸಾವಿರ, ಡಿಪ್ಲೊಮಾದವರಿಗೆ 1.500 ಸಾವಿರ ರೂ.

ಯುವನಿಧಿ ಯೋಜನೆ ಅಡಿ ಎಲ್ಲ ಪ್ರತಿ ತಿಂಗಳು ಪಧವಿದದರಿಗೆ 3 ಸಾವಿರ, ಡಿಪ್ಲೊಮಾದವರಿಗೆ  1.500 ಸಾವಿರ 24 ತಿಂಗಳು ನೀಡುತ್ತೇವೆ. ಆದರೆ ಇದರ ಒಳಗೆ ಯಾರಾದರೂ ಸರ್ಕಾರಿ ಮತ್ತು ಖಾಸಗಿ ಕಂಪನಿಗಳಿಗೆ ಸೇರಿದ್ದರೇ ಅವರಿಗೆ ನೀಡುವುದಿಲ್ಲ. ಇವರು ನಿರುದ್ಯೋಗಿಗಳು ಎಂದು ಘೋಷಿಸಿಕೊಂಡಿರಬೇಕು. ಮತ್ತು ಇದಕ್ಕೆ ಅರ್ಜಿಸಲ್ಲಿಸುವುದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Key words: Cabinet -meeting -agreed – implement -5 guarantee –schemes-CM Siddaramaiah