ಕಾಂಗ್ರೆಸ್ ಹೇಳೋದೆಲ್ಲಾ ಸತ್ಯ ಅಲ್ವಾ: ಬಿಜೆಪಿ ಅವಧಿಯಲ್ಲಿನ ಎಲ್ಲಾ ಕೇಸ್ ಗಳ ಬಗ್ಗೆ ತನಿಖೆ ನಡೆಸಿ- ಸಂಸದ ಪ್ರತಾಪ್ ಸಿಂಹ ವ್ಯಂಗ್ಯ.

ಮೈಸೂರು,ಜೂನ್,2,2023(www.justkannada.in): ಕಾಂಗ್ರೆಸ್ ಹೇಳೋದೆಲ್ಲಾ ಸತ್ಯ ಅಲ್ವಾ. ಬಿಜೆಪಿ ಅವಧಿಯಲ್ಲಿನ  ಎಲ್ಲಾ ಹಗರಣಗಳ  ಬಗ್ಗೆ  ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ, ಸತ್ಯ ಬಯಲಿಗೆ ಬರುತ್ತದೆ ಮತ್ತು ಕಾಂಗ್ರೆಸ್ ನಾಯಕರು ಸತ್ಯಸಂಧರು ಅನ್ನೋದು ಜನಕ್ಕೆ ಗೊತ್ತಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿದ ಎಲ್ಲಾ ಹಗರಣಗಳ ತನಿಖೆಯಾಗಲಿ.  ಕಾಂಗ್ರೆಸ್ ಅರೋಪ ಮಾಡಿದ 40 ಪರ್ಸೆಂಟ್ ಕಮಿಷನ್, ಪಿಎಸ್ ಐ ನೇಮಕಾತಿ ಹಗರಣ, ಕೋವಿಡ್ ಪಿಡುಗು ಸಂದರ್ಭದಲ್ಲಿನ ಹಗರಣ, ಮೊದಲಾದ ಎಲ್ಲ ಹಗರಣಗಳ ತನಿಖೆಗೆ ಕಾಂಗ್ರೆಸ್ ಸರ್ಕಾರ ಆದೇಶಿಸಿದರೆ, ಸತ್ಯ ಬಯಲಿಗೆ ಬರುತ್ತದೆ ಮತ್ತು ಕಾಂಗ್ರೆಸ್ ನಾಯಕರು ಸತ್ಯಸಂಧರು ಎನ್ನುವುದು ಜನಕ್ಕೆ ಗೊತ್ತಾಗುತ್ತದೆ ಎಂದು  ವ್ಯಂಗ್ಯವಾಡಿದರು.

ಸರ್ಕಾರವೇ ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಕೈಯಲ್ಲಿರುವುದರಿಂದ ಅವರು ಎಲ್ಲ ಹಗರಣಗಳ ತನಿಖೆ ಮಾಡಿಸಲಿ.  ಆ ಹಗರಣಗಳಲ್ಲಿ ಬಿಜೆಪಿ ಸೇರಿದವರೇನಾದರೂ ಇದ್ದರೆ ಕ್ರಮ ಕೈಗೊಳ್ಳಲಿ. ಇದರಿಂದ ಪಕ್ಷವನ್ನು ಸ್ವಚ್ಛಗೊಳಿಸಿದಂತಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.

Key words: Congress – Investigate – cases- during- BJP- MP- Pratap Simha