ಆನ್ ಲೈನ್ ಕ್ಲಾಸ್ ಎಫೆಕ್ಟ್: ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿ ಮಾರಿ ಟಿವಿ ಖರೀದಿಸಿದ ತಾಯಿ…

ಗದಗ,ಜು,31,2020(www.justkannada.in): ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೋನಾ ಮಹಾಮಾರಿಯಿಂದಾಗಿ ಎಲ್ಲರೂ ಇದೀಗ ಹೆಚ್ಚು ಆನ್ ಲೈನ್ ವ್ಯವಹಾರಕ್ಕೆಅಂಟಿಕೊಂಡಿದ್ದಾರೆ. ಹಾಗೆಯೇ ಶಿಕ್ಷಣವೂ ಕೂಡ ಕರೋನಾ ಹಾವಳಿಯಿಂದಾಗಿ ಟಿವಿ ಹಾಗೂ ಮೊಬೈಲ್ ಮೇಲೆ  ಅವಲಂಬನೆಯಾಗಿದೆ.

ಈ ಮಧ್ಯೆ ಕೊರೋನಾದಿಂದಾಗಿ ಶಾಲಾ-ಕಾಲೇಜುಗಳು ಬಂದ್ ಆಗಿದ್ದು ಮಕ್ಕಳಿಗೆ ಆನ್ ಲೈನ್ ನಲ್ಲಿ ಪಾಠ ಮಾಡಲಾಗುತ್ತಿದೆ.  ಹಣವಿರುವವರ ಮಕ್ಕಳು ಮೂಬೈಲ್ ಮೂಲಕ ಟಿವಿ, ಮೊಬೈಲ್  ಕಪ್ಯೂಟರ್  ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೇ ಬಡ ಕುಟುಂಬಗಳು ಮಾತ್ರ ಇದರಿಂದ ವಂಚಿತರಾಗುತ್ತಾರೆ.jk-logo-justkannada-logo

ಈ ನಡುವೆ ಇಲ್ಲೊಬ್ಬ ತಾಯಿ ತನ್ನ ಮಕ್ಕಳ ಶಿಕ್ಷಣಕ್ಕಾಗಿ ತಾಳಿಯನ್ನೇ ಅಡವಿಟ್ಟು ಟಿವಿ ಖರೀದಿಸಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಹಿಳೆ ಕಸ್ತೂರಿ ಎಂಬುವವರೇ ತನ್ನ ಮಕ್ಕಳಿಗೆ ಶಿಕ್ಷಣಕ್ಕಾಗಿ 20 ಸಾವಿರ ರೂಗೆ ತನ್ನ ಚಿನ್ನದ ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದಾರೆ.

ಕಸ್ತೂರಿ  ಮಹಿಳೆಯ ಮಕ್ಕಳಲ್ಲಿ ಒಬ್ಬರು 7ನೇ ಮತ್ತೊಬ್ಬರು 8 ನೇ ತರಗತಿಯಲ್ಲಿ  ಓದುತ್ತಿದ್ದಾರೆ. ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠವನ್ನ ಕೇಳಲು ಪ್ರತಿದಿನ ಟಿವಿ ನೋಡುವಂತೆ ಶಿಕ್ಷಕರು ಹೇಳಿದ್ದರು. ಆದರೆ ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿತ್ತು. ಹೀಗಾಗಿ ತಾಯಿ ಕಸ್ತೂರಿ ತನ್ನ ತಾಳಿ ಅಡವಿಟ್ಟು ಟಿವಿ ಖರೀದಿಸಿದ್ದಾರೆ. Online Class –Effect-gadag-mother -bought - TV - children's- education.

ಈ ಬಗ್ಗೆ ಪ್ರತಿಕ್ರಿಯಿಸಿರುವ ನರಗುಂದ ತಹಶೀಲ್ದಾರ್ ಮಹೇಂದ್ರ,  ಗ್ರಾಮಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಗೆ ವರದಿ ನೀಡುತ್ತೇವೆ. ಡಿಸಿ ಮಾರ್ಗದರ್ಶನದಂತೆ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Key words: Online Class –Effect-gadag-mother -bought – TV – children’s- education.