ಮರಾಠಿ ಯುವ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆ

ಮುಂಬೈ, ಜುಲೈ 31, 2020 (www.justkannada.in): ಮರಾಠಿ ಚಿತ್ರರಂಗದ ಯುವ ನಟ ಅಶುತೋಷ್ ಭಾಕ್ರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮರಾಠಾವಾಡಾ ಪ್ರದೇಶ ನಾಂಡೇದ್ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾಕರ್, ಇಚರ್ ತರ್ಲಾ ಪಕ್ಕಾ ಮುಂತಾದ ಚಿತ್ರಗಳಲ್ಲಿ ಅಶುತೋಷ್ ನಟಿಸಿದ್ದರು.

ಅಶುತೋಷ್ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಅವರು ಕೆಲವು ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ವ್ಯಕ್ತಿ ಏಕೆ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾನೆ ಎಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.