ಬಿ.ವೈ ವಿಜಯೇಂದ್ರಗೆ ಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರ: ಮಾಜಿ ಸಿಎಂ ಬಿಎಸ್ ವೈ ಸ್ಪಷ್ಟನೆ ನೀಡಿದ್ದು ಹೀಗೆ..

ಬೆಂಗಳೂರು,ಮೇ,25,2022(www.justkannada.in): ಬಿ.ವೈ ವಿಜಯೇಂದ್ರಗೆ ವಿಧಾನಪರಿಷತ್ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ. ವಿಜಯೇಂದ್ರಗೆ ಬೇರೆ ಬೇರೆ ಅವಕಾಶ ಇದೆ. ಹೈಕಮಾಂಡ್ ವಿಜಯೇಂದ್ರಗೆ ಬೇರೆ ಅವಕಾಶ ನೀಡುತ್ತೆ.  ಅವಕಾಶ ನೀಡುವುದು ಪ್ರಧಾನಿ ಮೋದಿ ಮತ್ತು ಜೆ.ಪಿ ನಡ್ಡಾಗೆ ಬಿಟ್ಟಿದ್ದು ಶೀಘ್ರದಲ್ಲೇ ಕೆಲವು ಮಾರ್ಪಾಡಾಗಬಹುದು ಎಂದಿದ್ದಾರೆ.

ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ಈಗಲೇ ಚರ್ಚೆ ಯಾಕೆ..?  ಸಮಯ ಬಂದಾಗ ನೋಡೋಣ ಎಂದ ಬಿಎಸ್ ವೈ ತಿಳಿಸಿದರು.

ಹಾಗೆಯೇ ವಿಜಯೇಂದ್ರಗೆ ನೀಡುವುದಕ್ಕೆ ಬಿಎಲ್ ಸಂತೋಷ್ ಅಡ್ಡಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಿಎಸ್ ವೈ,   ವಿಜಹಯೇಂದ್ರಗೆ ಟಿಕೆಟ್ ಕೈತಪ್ಪುವುದಕ್ಕೂ  ಬಿಎಲ್ ಸಂತೋಷ್ ಗೂ ಸಂಬಂಧವಿಲ್ಲ. ಬಿಎಲ್ ಸಂತೋಷ್ ಅವರು ಅಡ್ಡಿಪಡಿಸಿಲ್ಲ ಎಂದರು.

Key words: MLC-ticket – BY Vijayendra –missed- Former CM -BS Yeddyurappa