ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಕೈ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಈ ಬಾರಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತಾರೆಂದ ಸಿದ‍್ಧರಾಮಯ್ಯ..

ಮೈಸೂರು,ಮೇ,25,2022(www.justkannada.in):  ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿ ಮಧು  ಜಿ ಮಾದೇಗೌಡ ಅವರು ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು.

ಕಾಂಗ್ರೆಸ್ ಕಚೇರಿಯಿಂದ ಪ್ರಾದೇಶಿಕ ಆಯುಕ್ತರ ಕಚೇರಿವರೆಗೆ ಕಾಲ್ನಡಿಗೆಯಲ್ಲಿಯೇ ಮೆರವಣಿಗೆ  ಮೂಲಕ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವರಾದ ಹೆಚ್.ಸಿ‌.ಮಹಾದೇವಪ್ಪ, ಚಲುವರಾಯಸ್ವಾಮಿ, ಶಾಸಕ ಹೆಚ್.ಪಿ.ಮಂಜುನಾಥ್ ಸೇರಿ ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ , ಈ ಬಾರಿ ನಮ್ಮ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ. ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ ನಮ್ಮ ಅಭ್ಯರ್ಥಿ ಗೆಲುವಿಗೆ ಪೂರಕವಾಗುತ್ತೆ‌. ರಾಜ್ಯ ಸರ್ಕಾರದ ನಡೆಯಿಂದ ಪದವೀಧರರು ರೋಸಿ ಹೋಗಿದ್ದಾರೆ. ಉದ್ಯೋಗ ಕೊಡುತ್ತೇನೆ ಎಂದು ನಿರುದ್ಯೋಗ ಸೃಷ್ಟಿ ಮಾಡಿದ್ದಾರೆ. ಪ್ರಾಧ್ಯಾಪಕ, ಪಿಎಸ್.ಐ ನೇಮಕಾತಿ ಹಗರಣಗಳು ಈ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ. ಈ ಹಗರಣಗಳು ಬಿಜೆಪಿ ಭ್ರಷ್ಟಾಚಾರದ ಒಂದು ಭಾಗ ಎಂದು ಟೀಕಿಸಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಸಭೆ: ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಮತದಾರರು ಎಲ್ಲರೂ ಪದವೀಧರು. ಈ ಬಾರಿ ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ನಮ್ಮ ಅಭ್ಯರ್ಥಿ ಮಧು ಮಾದೇಗೌಡರನ್ನ ಮುಂಚಿತವಾಗಿ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದೇವೆ.. ಈ ಹಿಂದೆ ಮದ್ದೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರು. ಅವರ ತಂದೆ ಮಾದೇಗೌಡ 6 ಬಾರಿ ಎಂಎಲ್ ಎ, ಸಂಸದರು ಆಗಿದ್ದರು. ಗ್ರಾಮೀಣ ಭಾಗದ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ಧವರು. ಕೊನೇ ಉಸಿರಿರುವವರೆಗೂ ಜನರಿಗಾಗಿ ಹೋರಾಟ ಮಾಡಿದರು. ಪ್ರಾಮಾಣಿಕತೆ ಬದ್ಧತೆ ಇದ್ದಂತವರು ಮಾದೇಗೌಡ‌. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿದ್ಯಾಸಂಸ್ಥೆ ತೆರೆದಿದ್ದಾರೆ. ಲಕ್ಷಾಂತರ ಜನ ವಿದ್ಯಾವಂತರಾಗಿ ಹೊರ ಬಂದಿದ್ದಾರೆ.

ಈಗ ಅದೇ ಸಂಸ್ಥೆ ಮಧು ಮಾದೇಗೌಡ ನಡೆಸುತ್ತಿದ್ದಾರೆ. ತಂದೆ ನಡೆದ ದಾರಿಯಲ್ಲೆ ಮಧು ಮಾದೇಗೌಡ ಸಾಗುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಏನಾದ್ರು ಬದಲಾವಣೆ ಮಾಡಬೇಕು ಅಂತ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷ ಅವರನ್ನ ಅಭ್ಯರ್ಥಿ ಮಾಡಿದೆ. ಈ ದೇಶಕ್ಕೆ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ತಂದು ಕೊಟ್ಟಿದೆ. ಈ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ. ಸರ್ವತೋಮುಖ ಅಭಿವೃದ್ಧಿ ಈ ದೇಶ ಕಂಡಿದೆ ಎಂದರೆ ಅದು ಕಾಂಗ್ರೆಸ್ ನಿಂದ ಬಿಜೆಪಿಯಿಂದ ಅಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಬಿಜೆಪಿ ಸ್ವತಂತ್ರ ಹೋರಾಟದಲ್ಲಿ ಇರಲಿಲ್ಲ. ಸುಳ್ಳು ಹೇಳಿಕೊಂಡು ಅಧಿಕಾರ ಬಿಜೆಪಿ ಬಂದಿದೆ. ದೇಶದಲ್ಲಿ ಅಶಾಂತಿ, ಬೆಲೆ ಏರಿಕೆ, ಬಡತನ ಹೆಚ್ಚಾಗಿದ್ರೆ, ಅಲ್ಪಸಂಖ್ಯಾತರು ಕಷ್ಟದಲ್ಲಿ ಇದ್ದರೆ ಅದಕ್ಕೆ ಬಿಜೆಪಿ ಕಾರಣ. ಈಗ ಪೆಟ್ರೋಲ್,ಡಿಸೇಲ್ ಗ್ಯಾಸ್ ಬೆಲೆ ಹೆಚ್ಚಾಗಿದೆ. ಇದಕ್ಕೆ ಯಾರು ಕಾರಣ. ಬಿಜೆಪಿ ಏನು ಕಡಿದು ಕಟ್ಟಾಕ್ಕಿದ್ದಾರೆ ಅಂತ ಓಡಾಡ್ತಾ ಇದ್ದಾರೆ. ವಿದ್ಯಾವಂತ ಮತದಾರರಿಗೆ ಇವೆಲ್ಲವೂ ಗೊತ್ತಿದೆ. ಮತದಾರನ್ನು ವೈಯಕ್ತಿಕವಾಗಿ ಭೇಟಿ ಮಾಡಿ. ಮೈಸೂರು ನಗರದವರು ಹೆಚ್ವು ಕೆಲಸ ಮಾಡಬೇಕು. ಮೈಸೂರು ಜಿಲ್ಲೆಯ ಹೆಚ್ವಿನ ಮತಗಳು ಇವೆ. ಮನೆ ಬಾಗಿಲಿಗೆ ತೆರಳಿ ಬಿಜೆಪಿ ಭ್ರಷ್ಟಾಚಾರ, ನಿಷ್ಕ್ರಿಯತೆ, ಬೆಲೆ ಏರಿಕೆ ಇವೆಲ್ಲವನ್ನು ಮತದಾರರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ಬಿಜೆಪಿ ದೇಶದ ಸಾಮರಸ್ಯ ಹಾಳು ಮಾಡಿದೆ. ಶಾಂತಿ ನೆಮ್ಮದಿ ಇಲ್ಲದೆ ಹೊದ್ರೆ ದೇಶ ಉದ್ದಾರ ಆಗಲ್ಲ. ಇದೇ ರೀತಿ ಬಿಜೆಪಿ ಬಿಟ್ರೆ ಶ್ರೀಲಂಕಾಕ್ಕೆ ಆದ ಸ್ಥಿತಿ ಬರಲಿದೆ. ಅದು ಆಗದೆ ಇರಬೇಕು ಅಂದ್ರೆ ಬಿಜೆಪಿ ತೊಲಗಬೇಕು‌. ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಜೆಡಿಎಸ್ ಗೆಲ್ಲೊಲ್ಲ ಅಂತ ಗೊತ್ತು. ಅದಕ್ಕೆ ಶ್ರೀಕಂಠೆಗೌಡ ಸ್ಪರ್ಧೆ ಮಾಡಲಿಲ್ಲ. ಮಂಡ್ಯದಲ್ಲಿ 7 ಜೆಡಿಎಸ್ ಎಂಎಲ್ ಎ ಇದ್ರೂ ಗೂಳಿಗೌಡ ಮಂಡ್ಯದಲ್ಲಿ ಗೆದ್ದಿದ್ದಾರೆ ಅಂದ್ರೆ ಇಲ್ಲಿ ಗೆಲ್ಲಲು ಆಗಲ್ವಾ. ನೀವು ಕೆಲಸ ಸರಿಯಾಗಿ ಮಾಡಿದ್ರೆ ಮಧು ಮಾದೇಗೌಡ ನೂರಕ್ಕೆ ನೂರು ಗೆದ್ದೇ ಗೆಲ್ತಾರೆ. ನೀವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕರೆ‌ ನೀಡಿದರು.

Key words:  election – Southern-Graduate-constituency-Nomination-congress-candidate-siddaramaiah