Sunday, August 9, 2026

BDA Apartments

Home Front Page ಮೈಸೂರಿನಲ್ಲಿ ಎನ್ ಟಿಎಂಎಸ್ ಶಾಲೆ ಮುಚ್ಚುವ ವಿಚಾರ: ಎಂಎಲ್ ಸಿ ಹೆಚ್.ವಿಶ್ವನಾಥ್ ವಿರೋಧ

ಮೈಸೂರಿನಲ್ಲಿ ಎನ್ ಟಿಎಂಎಸ್ ಶಾಲೆ ಮುಚ್ಚುವ ವಿಚಾರ: ಎಂಎಲ್ ಸಿ ಹೆಚ್.ವಿಶ್ವನಾಥ್ ವಿರೋಧ

ಮೈಸೂರು,ಜೂನ್,29,2021(www.justkannada.in): ಮೈಸೂರಿನಲ್ಲಿ ಎನ್ ಟಿಎಂ ಎಸ್ ಶಾಲೆ ಮುಚ್ಚುವುದಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಎಂಎಲ್ ಸಿ ಹೆಚ್.ವಿಶ್ವನಾಥ್, ಮಹಾರಾಣಿ ಜಯಲಕ್ಷ್ಮಮ್ಮಣ್ಣಿ ನಿರ್ಮಾಣ ಮಾಡಿದ ರಾಜ್ಯದ ಮೊದಲ ಹೆಣ್ಣು ಮಕ್ಕಳ ಶಾಲೆ ಇದು. ಈ ಶಾಲೆಗೆ ಇತಿಹಾಸ ಇದೆ‌. ಶಾಲೆ ಮುಚ್ಚಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡ್ತೀವಿ ಅನ್ನೋದು ಸರಿಯಲ್ಲ. ಶಾಲೆಯೂ ಉಳಿಯಬೇಕು, ಸ್ಮಾರಕ ಕೂಡ ಆಗಬೇಕು ಎಂದು ತಿಳಿಸಿದರು.

ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ಅವರು ಶಾಲೆಯ ಸ್ವಲ್ಪ ಜಾಗವನ್ನ ಕಾರ್ ಶೆಡ್ ಮಾಡಿಕೊಂಡಿದ್ದಾರೆ. ಅದನ್ನು ಬಿಡಿಸಿಕೊಂಡರೇ ಶಾಲೆ, ಸ್ಮಾರಕ ಎರಡೂ ನಿರ್ಮಾಣವಾಗಲಿ ಎಂದು ಹೆಚ್.ವಿಶ್ವನಾಥ್ ಅಭಿಮತ‌ ವ್ಯಕ್ತಪಡಿಸಿದರು.

Key words: NTMS school close- Mysore- MLC- H. Vishwanath -Opposition.