ಅನಧಿಕೃತ ‘ ಒತ್ತು WORRY’ ತೆರವಿಗೆ ನೋಟೀಸ್ ನೀಡಿ ಕಾರ್ಯಾಚರಣೆಯನ್ನೇ ಮುಂದೂಡಿದ MUDA..!

 

ಮೈಸೂರು, ಜೂ.29, 2021 : (www.justkannada.in news ) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಅನಧಿಕೃತ ಒತ್ತುವರಿ ತೆರವಿಗೆ ನೋಟೀಸ್ ನೀಡಿ, ಅದಕ್ಕಾಗಿ ದಿನಾಂಕವನ್ನು ನಿಗಧಿಪಡಿಸಿ, ಕಡೆ ಗಳಿಗೆಯಲ್ಲಿ ಒತ್ತುವರಿ ತೆರವು ಕೈಬಿಟ್ಟಿದ್ದಾರೆ ಎನ್ನಲಾದ ಪ್ರಕರಣ ನಡೆದಿದೆ.

ಮೊದಲು ನೋಟೀಸ್ ನೀಡಿ ಬಳಿಕ ಒತ್ತುವರಿ ಕಾರ್ಯಾಚರಣೆಯೇ ಮುಂದೂಡಿಕೆ. ಅನುಮಾನ ಮೂಡಿಸಿದ ಮುಡಾ ಅಧಿಕಾರಿಗಳ ಈ ನಡೆ.
ನಗರದ ವಲಯ ಕಚೇರಿ-2ರ ವ್ಯಾಪ್ತಿಯಲ್ಲಿ ಅನಧಿಕೃತ ತೆರವಿಗೆ ಆದೇಶಿಸಿದ್ದ ಆಯುಕ್ತ ಡಾ.ನಟೇಶ್. ಈ ಸಂಬಂಧ ಇಂದು ಬೆಳಿಗ್ಗೆ 5 ಗಂಟೆಗೆ ಅನಧಿಕೃತ ತೆರವು‌ ಕಾರ್ಯಾಚರಣೆಗೆ ಆದೇಶಿಸಲಾಗಿತ್ತು. ಜತೆಗೆ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರು‌ ಹಾಗೂ ಸಿಬ್ಬಂದಿಗಳು ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

jk

ಆದರೆ ಧಿಡೀರ್ ಈ ತೆರವು ಕಾರ್ಯಾಚರಣೆಯನ್ನೇ ಅಧಿಕಾರಿಗಳು ಮುಂದೂಡಿರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ. ತೆರವು ಕಾರ್ಯಾಚರಣೆ ಮುಂದೂಡಿಕೆ ಬಗ್ಗೆ ಆಯುಕ್ತ ಡಾ.ನಟೇಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಲಾಯಿತಾದರೂ, ಅವರು ಕರೆ ಸ್ವೀಕರಿಸಲಿಲ್ಲ.

ತೆರವುಗೊಳಿಸಿ 7.9 ಕೋಟಿ ರೂ. ಮೌಲ್ಯದ ಸ್ವತ್ತು ವಶ:

ಮೈಸೂರಿನಲ್ಲಿ ಮುಡಾ ಅಧಿಕಾರಿಗಳ ಕಾರ್ಯಾಚರಣೆ. 7 ಕೋಟಿ 90 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ. ಮೈಸೂರು ತಾಲೂಕು ಕಸಬಾ ಹೋಬಳಿ ಹಿನ್ ಕಲ್ ಗ್ರಾಮದಲ್ಲಿ ಸರ್ವೆ ನಂ.9ರಲ್ಲಿ 33ಗುಂಟೆ ಜಮೀನು ಮುಡಾ ವಶಕ್ಕೆ. ಸದರಿ ಸ್ವತ್ತಿನ ಭೂ ಮಾಲೀಕರಿಗೆ ಪರಿಹಾರದ ಮೊಬಲಗನ್ನ ಪಾವತಿಸಿದ್ದ ಮುಡಾ. ಆದರೂ ಅನಧಿಕೃತ ಶೆಡ್ ಗಳನ್ನ ನಿರ್ಮಿಸಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಿದ ಮುಡಾ ಅಧಿಕಾರಿಗಳು. ಮುಡಾ ಆಯುಯ ಡಾ.ಡಿ.ಬಿ ನಟೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ

ಆಯುಕ್ತರ ಹೇಳಿಕೆ :

ನಗರದ ವಲಯ ಕಚೇರಿ-2ರ ವ್ಯಾಪ್ತಿಯಲ್ಲಿ ಅನಧಿಕೃತ ತೆರವಿಗೆ ಆದೇಶಿಸಲಾಗಿತ್ತು. ಆದರೆ ಸಂಬಂಧಪಟ್ಟ ವ್ಯಕ್ತಿ ಕೋವಿಡ್ ನಿಂದ ಇತ್ತೀಚೆಗಷ್ಟೆ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ. ಜತೆಗೆ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಒತ್ತುವರಿ ತೆರವಿನಿಂದ ಆಘಾತಕ್ಕೀಡಾಗಿ ಅವಘಡ ಸಂಭವಿಸಬಹುದು. ಮೂರುದಿನಗಳ ಕಾಲಾವಕಾಶ ನೀಡಿ, ನಾವೇ ಒತ್ತುವರಿ ತೆರವು ಮಾಡುತ್ತೇವೆ  ಎಂದು ಕುಟುಂಬದವರು ವಿನಂತಿಸಿಕೊಂಡರು. ಆದ್ದರಿಂದ ಮಾನವೀಯ ನೆಲೆಗಟ್ಟಿನಲ್ಲಿ ಅವರಿಗೆ ಅವಕಾಶ ಕಲ್ಪಿಸಿದ್ದು, ಮೂರು ದಿನಗಳೊಳಗೆ ಒತ್ತುವರಿ ತೆರವುಗೊಳಿಸದಿದ್ದರೆ, ಮುಡಾ ಅಧಿಕಾರಿಗಳ ನೇತೃತ್ವದಲ್ಲೇ ತೆರವು ಕಾರ್ಯಚರಣೆ ನಡೆಸಲಾಗುವುದು ಎಂದು ಜಸ್ಟ್ ಕನ್ನಡದಲ್ಲಿನ ವರದಿಗೆ ಮುಡಾ ಆಯುಕ್ತ ಡಾ.ನಟೇಶ್, ದೂರವಾಣಿ ಮೂಲಕ ಸ್ಪಷ್ಟನೆ ನೀಡಿದರು.

 

 

key words : mysore-urban-development-authority=MUDA-demolition-drive-canceeleed-commissioner-natesh