Tuesday, September 22, 2026

BDA Apartments

ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸವಿಲ್ಲ : ಸಂಸದ ಪ್ರತಾಪ್ ಸಿಂಹ...
Home Front Page ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸವಿಲ್ಲ : ಸಂಸದ ಪ್ರತಾಪ್ ಸಿಂಹ್ 

ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸವಿಲ್ಲ : ಸಂಸದ ಪ್ರತಾಪ್ ಸಿಂಹ್ 

ಮೈಸೂರು,ನವೆಂಬರ್,15,2020(www.justkannada.in) : ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವ ಅಭ್ಯಾಸವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ್ ಹೇಳಿದ್ದಾರೆ.kannada-journalist-media-fourth-estate-under-loss

ನೆನ್ನೆ ಮಂಡ್ಯ ಸಂಸದೆ ಸುಮಲಾತಾರನ್ನು ಟೀಕಿಸಿದ ವಿಚಾರವಾಗಿ ಭಾನುವಾರ ಸ್ಪಷ್ಟನೆ ನೀಡಿರುವ ಸಂಸದ ಪ್ರತಾಪ್ ಸಿಂಹ, ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನ್ನ ಕ್ಷೇತ್ರಕ್ಕೆ ಹೋಗದಿದ್ದರೂ, ಮಂಡ್ಯದ ಜನರ ಒಳಿತಾಗಿ ಕೆಲಸ ಮಾಡಿಸುತ್ತೇನೆ. ಯಡಿಯೂರು ಗ್ರಾಮದಲ್ಲಿ ಬ್ರಿಡ್ಜ್ ನಿರ್ಮಾಣ ಕೆಲಸಕ್ಕೆ ಕೆಲವರು ತೊಂದರೆ ಕೊಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆ ಸಮಸ್ಯೆ ನಿವಾರಿಸೋಣ ಎಂದು ಹೇಳಿದ್ದೆ ಹೊರತು ಯಾರನ್ನೂ ಟೀಕಿಸಿಲ್ಲ ಎಂದು ಪ್ರತಾಪ್ ಸಿಂಹ್ ಹೇಳಿದ್ದಾರೆ.

ದಶಪಥ ಕಾಮಗಾರಿ ಬೃಹತ್ ಯೋಜನೆಗೆ ಅಡ್ಡಿಯಾದರೆ ಸುಮ್ಮನಿರಲಾಗದು 

ನನಗೆ ಅಭಿವೃದ್ಧಿ ಮುಖ್ಯ. ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ದಶಪಥ ಕಾಮಗಾರಿ ವಿಚಾರದಲ್ಲಿಯೂ ನಾನು ಯಾರ ಬಗ್ಗೆಯೂ ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನರ ಅನುಕೂಲಕ್ಕೆಂದು ಬೃಹತ್ ಯೋಜನೆ ನೀಡಿದ್ದಾರೆ. ಅದು ಸಾಕಾರಗೊಳ್ಳಬೇಕು ಎಂಬುದಷ್ಟೇ ನನ್ನ ಉದ್ದೇಶ. ಇದಕ್ಕೆ ಅಡ್ಡಿಯಾದರೆ ಸುಮ್ಮನಿರಲಾಗದು ಎಂದು ಎಚ್ಚರಿಕೆ ನೀಡಿದ್ದಾರೆ.

no-practice-talking-about-anyone-person-MP-Pratap Simha

key words : no-practice-talking-about-anyone-person-MP-
Pratap Simha