ಬೇಡಿಕೆ ಬಗ್ಗೆ ಆಕ್ಷೇಪವಿಲ್ಲ: ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ-ಸಾರಿಗೆ ನೌಕರರಲ್ಲಿ ಸಚಿವ ಶಿವರಾಂ ಹೆಬ್ಬಾರ್ ಮನವಿ…

ಕಲಬುರಗಿ,ಏಪ್ರಿಲ್,11,2021(www.justkannada.in): ಸಾರಿಗೆ ನೌಕರರ ಮುಷ್ಕರವೇ ಕಾನೂನು ಬಾಹಿರವಾಗಿದೆ. ನಿಮ್ಮ ಬೇಡಿಕೆ ಬಗ್ಗೆ ಆಕ್ಷೇಪವಿಲ್ಲ. ಮುಷ್ಕರ ನಿಲ್ಲಿಸಿ ಮಾತುಕತೆಗೆ ಬರಬೇಕು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಮುಷ್ಕರ ನಿರತ ಸಾರಿಗೆ ನೌಕರರಲ್ಲಿ ಮನವಿ ಮಾಡಿದರು.Sanskrit Vivia,8th event,30 people,Ph.D,43graduates,M.Phil,Awarded 

ಕಲ್ಬುರ್ಗಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್,  ರಾಜ್ಯದ ಪ್ರತಿ ಕಾರ್ಮಿಕರ ಹಿತಕಾಯಲು ಇಲಾಖೆ ಬದ್ಧವಾಗಿದೆ. ಆದರೆ, ಸಾರಿಗೆ ನೌಕರರ ಮುಷ್ಕರವೇ ಕಾನೂನು ಬಾಹಿರವಾಗಿದೆ. ಅವರು ರಾಜಕೀಯ ಪ್ರೇರಿತವಾಗಿ ಮುಷ್ಕರ ನಡೆಸುತ್ತಿದ್ದಾರೆ.  ಯಾರದ್ದೋ ಮಾತು ಕೇಳಿ ಮುಷ್ಕರ ನಡೆಸುತ್ತಿದ್ದಾರೆ. ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಅನುಮತಿ ಇಲ್ಲ ಎಂದರು.No objection –demand- strike –Transport-worker- - Minister -Shivaram Hebbar

ವೇತನ ಪರಿಷ್ಕರಣೆ ಬಗ್ಗೆಯೂ ಮೇ 5ರ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ, ಸಂಧಾನಕ್ಕೆ ಬಾರದೇ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಅನ್ಯಮಾರ್ಗವಿಲ್ಲದೇ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ರಾಜ್ಯದ ಜನರಿಗೆ ತೊಂದರೆಯಾದರೇ ಸರ್ಕಾರ ಸುಮ್ಮನಿರಲು ಸಾಧ್ಯವಿಲ್ಲ ಎಂದು ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.

 

Key words: No objection –demand- strike –Transport-worker- – Minister -Shivaram Hebbar