Thursday, October 1, 2026

BDA Apartments

ಕಾವೇರಿ ನೀರಾವರಿ ನಿಗಮ ನಿಯಮಿತ, ಹುಣಸೂರು… BDA JK_Adv BDA Adv
Home Front Page ಇನ್ಮುಂದೆ ಚಿಕ್ಕಬಳ್ಳಾಪುರ ಕ್ಷೇತ್ರದ ಆಸೆ ಬಿಟ್ಟು ಬಿಡಿ- ಡಾ.ಕೆ.ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್.

ಇನ್ಮುಂದೆ ಚಿಕ್ಕಬಳ್ಳಾಪುರ ಕ್ಷೇತ್ರದ ಆಸೆ ಬಿಟ್ಟು ಬಿಡಿ- ಡಾ.ಕೆ.ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್.

ಚಿಕ್ಕಬಳ್ಳಾಪುರ,ಜುಲೈ,29,2023(www.justkannada.in):  ಕ್ಷೇತ್ರದಲ್ಲಿ ಶಾಸಕರು ಗೂಂಡಾಗಿರಿ ರಾಜಕಾರಣ ಮಾಡುತ್ತಿದ್ದಾರೆ ಎಂದು ತಮ್ಮ ವಿರುದ್ಧ ಆರೋಪಿಸಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್ ಗೆ ಶಾಸಕ ಪ್ರದೀಪ್ ಈಶ್ವರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಸುಧಾಕರ್ ಬೇರೆ ಕ್ಷೇತ್ರ ಹುಡುಕಿಕೊಳ್ಳೋದು ಒಳ್ಳೆಯದು. ಇನ್ಮುಂದೆ ಚಿಕ್ಕಬಳ್ಳಾಪುರ ಕ್ಷೇತ್ರ ಆಸೆ ಬಿಟ್ಟುಬಿಡಿ  ಎಂದು ಟಾಂಗ್ ನೀಡಿದ್ದಾರೆ.

ಮಾಜಿ ಸಚಿವ ಸುಧಾಕರ್ ಗೆ ಮಾನ ಮರ್ಯಾದೆ ಇದೆಯಾ..? ಯಾರು ಗೂಂಡಾ ರಾಜಕಾರಣ ಮಾಡಿದ್ದಾರೆ ಅನ್ನೋದು ಗೊತ್ತಿದೆ .  ನನ್ನ ಅವಧಿಯಲ್ಲಿ ಯಾರಾದ್ರೂ ಬಾಲ ಬಿಚ್ಚಿದ್ದರೇ ಕಟ್ ಮಾಡ್ತೇವೆ  ಅಧಿಕಾರ ಇಲ್ಲದಿರುವಾಗಲೇ ಬಾಲ ಕಟ್ ಮಾಡುತ್ತಿದ್ದವು. ಸುಧಾಕರ್ ಅವರೇ ನಿಮ್ಮ ಬೆಂಬಲಿಗರಿಗೆ ಬಾಲ ಬಿಚ್ಚದಂತೆ ಹೇಳಿ. ಬಾಲ ಬಿಚ್ಚಿದ್ರೆ ಕಟ್ ಮಾಡ್ತೇವೆ ಎಂದು ಹೇಳಿದರು.

Key words:  MLA- Pradeep Ishwar -Tong – Dr. K. Sudhakar -leave -Chikkaballapur Constituency.