ಮುಂದಿನ ವಾರದಿಂದ ಸರಿಗಮಪ ವೇದಿಕೆಯಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ವಿಜಯ್ ಪ್ರಕಾಶ್

ಬೆಂಗಳೂರು, ಜೂನ್ 4, 2019 (www.justkannada.in): ಝೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಸರಿಗಮಪದಲ್ಲಿ ಮುಂದಿನ ವಾರ ಗಾಯಕ ವಿಜಯ್ ಪ್ರಕಾಶ್ ಕಾಣಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಹಂಸಲೇಖ, ಅರ್ಜುನ್ ಜನ್ಯಾ, ವಿಜಯ್ ಪ್ರಕಾಶ್ ಹಾಗೂ ರಾಜೇಶ್ ಕೃಷ್ಣನ್ ತೀರ್ಪುಗಾರರಾಗಿದ್ದಾರೆ. ಆದರೆ ಕೆಲ ವಾರಗಳಿಂದ ಅವರು ಕಾಣಿಸಿಕೊಂಡಿರಲಿಲ್ಲ. ಇತ್ತೀಚಿಗಷ್ಟೇ ಅವರ ತಂದೆ ಇಹಲೋಕ ತ್ಯಜಿಸಿದ್ದರು. ಅಂದಿನಿಂದ ಅವರು ಸರಿಗಮಪ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ

ಇದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಟ್ವಿಟರ್ ನಲ್ಲಿ ವಿಜಯ್ ಅವರನ್ನು ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಮುಂದಿನ ವಾರ ಖಂಡಿತ ಬರುತ್ತೇನೆ ಎಂದು ಅಭಿಮಾನಿಗಳಿಗೆ ಉತ್ತರಿಸಿದ್ದಾರೆ.