Monday, September 21, 2026

BDA Apartments

ಬಿಜೆಪಿ ಬೆನ್ನಿಗೆ ಚೂರಿ ಹಾಕಿದೆ: ಮೈತ್ರಿ ಪ್ರಶ್ನೆಯೇ ಉದ್ಬವಿಸಲ್ಲ- ಮಹಾರಾಷ್...
Home Front Page ಬಿಜೆಪಿ ಬೆನ್ನಿಗೆ ಚೂರಿ ಹಾಕಿದೆ: ಮೈತ್ರಿ ಪ್ರಶ್ನೆಯೇ ಉದ್ಬವಿಸಲ್ಲ- ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ.

ಬಿಜೆಪಿ ಬೆನ್ನಿಗೆ ಚೂರಿ ಹಾಕಿದೆ: ಮೈತ್ರಿ ಪ್ರಶ್ನೆಯೇ ಉದ್ಬವಿಸಲ್ಲ- ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ.

ಮುಂಬೈ,ಜೂನ್,24,2022(www.justkannada.in): ಪಕ್ಷ ಉಳಿಸಲು ರಾಜೀನಾಮೆಗೂ ಸಿದ್ಧನಿದ್ಧೇನೆ. ಬಿಜೆಪಿ ಬೆನ್ನಿಗೆ ಚೂರಿ ಹಾಕಿದೆ. ಹೀಗಾಗಿ ಬಿಜೆಪಿ ಜೊತೆ ಮೈತ್ರಿ ಪ್ರಶ್ನೆಯೇ ಉದ್ಬವಿಸಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ‍್ಧವ್ ಠಾಕ್ರೆ ಹೇಳಿದ್ದಾರೆ.

ಇಂದು ಶಿವಸೇನೆ ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ಅನಿವಾರ್ಯವಾದರೇ ರಾಜೀನಾಮೆ ಸಿದ್ಧನಿದ್ದೇನೆ. ಸರ್ಕಾರಿ ಮನೆ ಬಿಟ್ಟಿದ್ದೇನೆ. ಆದರೆ ಯುದ್ಧ ಬಿಟ್ಟಿಲ್ಲ. ಈಗಲೂ ಹೋರಾಡುವ ಸ್ಥೈರ್ಯ ಇದೆ. ಒಬ್ಬ ಠಾಕ್ರೆ ಇಲ್ಲದೇ ಶಿವಸೇನೆ ನಡೆಸಿ ಎಂದು ಬಂಡಾಯ ಶಾಸಕ ಏಕನಾಥ್ ಸಿಂಧೆಗೆ ಸವಾಲು ಹಾಕಿದರು

ಏಕನಾಥ್ ಸಿಂಧೆ ಬಾಳಾ ಠಾಕ್ರೆ ಅವರ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ.  ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಯಾವುದೇ ಹಿಂಜರಿಕೆ ಇಲ್ಲ. ಬಿಜೆಪಿ ಜತೆ ಸಂಘರ್ಷಕ್ಕೆ ಇಳಿಯುವುದಿಲ್ಲ. ಪಕ್ಷ ಉಳಿವುಗಾಗಿ ಕೊನೆವರೆಗೂ ಹೋರಾಟಕ್ಕೆ ಸಿದ್ಧ ಎಂದು ಉದ‍್ಧವ್ ಠಾಕ್ರೆ ತಿಳಿಸಿದರು.

Key words: No –alliance- question-bjp-  Maharashtra CM -Uddhav Thackeray