Friday, August 7, 2026

BDA Apartments

Home Front Page ನಂ.1 ದ್ವೇಷದ ರಾಜಕಾರಣಿ ದೇವೇಗೌಡರು ಒಕ್ಕಲಿಗರನ್ನ ಬೆಳೆಸಲ್ಲ- ಸಿಎಂ ಸಿದ್ದರಾಮಯ್ಯ ಗುಡುಗು

ನಂ.1 ದ್ವೇಷದ ರಾಜಕಾರಣಿ ದೇವೇಗೌಡರು ಒಕ್ಕಲಿಗರನ್ನ ಬೆಳೆಸಲ್ಲ- ಸಿಎಂ ಸಿದ್ದರಾಮಯ್ಯ ಗುಡುಗು

ಚನ್ನಪಟ್ಟಣ,ನವೆಂಬರ್,11,2024 (www.justkannada.in): ದೇವೇಗೌಡರು ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಲ್ಲ. ದ್ವೇಷದ ರಾಜಕಾರಣ ಮಾಡೋದರಲ್ಲಿ ದೇವೇಗೌಡರು ನಂಬರ್ 1 ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

ಚನ್ನಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯನನ್ನು ನಾನು ಸಿಎಂ ಮಾಡಿದೆ ಅಂತಾರೆ. ಮಿಸ್ಟರ್ ದೇವೇಗೌಡ ನಿಮ್ಮನ್ನ ಸಿಎಂ ಮಾಡಿದ್ದು ಯಾರು ನಾನು ಜಾಲಪ್ಪ ಇಲ್ಲದೇ ಇದ್ದರೇ ನೀವು ಸಿಎಂ ಆಗುತ್ತಿರಲಿಲ್ಲ. ಇತಿಹಾಸ ಬದಲಿಸೋಕೆ ಆಗಲ್ಲ ಎಂದು ಟಾಂಗ್ ಕೊಟ್ಟರು.

ಚನ್ನಪಟ್ಟಣ ಟಿಕೆಟ್ ಸಿಪಿವೈಗೆ ಕೊಡಬೇಕಿತ್ತು. ಆದರೆ ಪುತ್ರ ವ್ಯಾಮೋಹದಿಂದ  ನಿಖಿಲ್ ಕುಮಾರಸ್ವಾಮಿಗೆ ಕೊಟ್ಟಿದ್ದಾರೆ.  ದೇವೇಗೌಡರ ಮೊಮ್ಮಗನಿಗೆ ನೀಡಿದ್ದಾರೆ. ಇವರು ಯಾವ ಒಕ್ಕಲಿಗ ನಾಯಕರನ್ನೂ ಬೆಳೆಸಲ್ಲ. ಮಿಸ್ಟರ್ ದೇವೇಗೌಡ ಹಿಂದೆ ಮೋದಿಯನ್ನು ಬೈಯ್ಯುತ್ತಿದ್ದೀರಿ . ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದಿದ್ರಿ.  ಈಗ ಅವರನ್ನ ಹೊಗುಳುತ್ತಿದ್ದೀರಿ. ಈಗ ಮೇಕೆದಾಟು ಮಾಡಲು ಮೋದಿ ಹೊಗಳುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

Key words: No. 1, Hateful, Politician, Deve Gowda, CM, Siddaramaiah